ಹಳಿಯಾಳ :- ಶಿವಾಜಿ ಜಯಂತಿ ಅಂಗವಾಗಿ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಂಗಳವಾರ ಸಾಯಂಕಾಲ ಅಶ್ವಾರೂಢ ಶಿವಾಜಿ ಪುಥ್ಥಳಿಗಳ ಬೃಹತ್ ಮೇರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಬಸವನಗಲ್ಲಿ-ಕಿಲ್ಲಾ ಪ್ರದೇಶ, ತಾನಾಜಿಗಲ್ಲಿ ಹಾಗೂ ಗುತ್ತಿಗೇರಿಗಲ್ಲಿಯ ಶಿವಾಜಿ ಮೂರ್ತಿಗಳ ಮೇರವಣಿಗೆಯಲ್ಲಿ ಕಿವಿ ಗಿಜಿಗೂಡುವ ಭಾರಿ ಶಬ್ದದ ಡಿಜೆ ಸಂಗೀತವನ್ನು ಬಳಸಲಾಗಿತ್ತು. ಡಿಜೆ ಸಂಗೀತಕ್ಕೆ ಸಾವಿರಾರು ಯುವಕರು ನೃತ್ಯ ಮಾಡಿದರು.
Leave a Comment