ಸಿದ್ದಾಪುರ: ತಾಲೂಕಿನ ಮಾವಿನಗುಂಡಿಯ ಸಮೀಪ ರಸ್ತೆಯ ಮೇಲೆ ಹಲವು ದಿನಗಳಿಂದ ಅನಾಥ ಮಹಿಳೆಯೊಬ್ಬಳು ಇರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಸಿದ್ದಾಪುರದ ಪ್ರಚಲಿತ ಆಶ್ರಯ ಧಾಮದ ನಾಗರಾಜ ನಾಯ್ಕ ಗುರುವಾರ ಮಹಿಳೆಯನ್ನು ರಕ್ಷಣೆ ಮಾಡಿ ಆಶ್ರಮಕ್ಕೆ ಕರೆತಂದಿದ್ದಾರೆ.
ಅನಾಥ ಮಹಿಳೆ ಹಿಂದಿ ಮಾತನಾಡುತ್ತಿದ್ದು, ಹೆಸರು ರೀನಾ ಎಂದು ಹೇಳುತಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳಿಯರಾದ ಮೋಹನ ನಾಯ್ಕ, ಪ್ರಚಲಿತ ಆಶ್ರಯಧಾಮದ ಮೇಲ್ವಿಚಾರಕಿ ಮಮತಾ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ಇವಳನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಿ ವೈದ್ಯಕೀಯ ಉಪಚಾರ ನಡೆಸಿ ಆಶ್ರಮಕ್ಕೆ ಕರೆತರಲಾಗಿದೆ ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9481389187 ಸಂಪರ್ಕಿಸುವಂತೆ ತಿಳಿಸಿದ್ದಾರೆ


Leave a Comment