ಹಳಿಯಾಳ :- ಮಕ್ಕಳು ಕೇವಲ ಇಂಟರನೆಟ್, ಕಂಪ್ಯೂಟರ, ಮೊಬೈಲ್‍ಗಳಲ್ಲಿ ವ್ಯರ್ಥ ಕಾಲ ಹರಣ ಮಾಡದೆ ಸರ್ಕಾರ ಉಚಿತವಾಗಿ ನಡೆಸುತ್ತಿರುವ ಬೇಸಿಗೆ ಶಿಬಿರಗಳ ಪಯೋಜನ ಪಡೆದು ಜ್ಞಾನವಂತರಾಗಬೇಕೆಂದು ಜೀಜಾಮಾತಾ ಮಹಿಳಾ ಮಂಡಳ ಮತ್ತು ಸಾಂತ್ವನ ಕೇಂದ್ರದ ಅಧ್ಯಕ್ಷೆ ಮಂಗಲಾ ಕಶೀಲ್ಕರ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಹಳಿಯಾಳ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಬಾಲಭವನ ಸೊಸೈಟಿ ವತಿಯಿಂದ ಇಲ್ಲಿಯ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ನಡೆಸಿದ ಮಕ್ಕಳ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಮಕ್ಕಳು ಬೇಸಿಗೆ ಶಿಬಿರಗಳ ಮೂಲಕ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಮಾತನಾಡಿ, ಬೇಸಿಗೆ ಶಿಬಿರ ಹಾಗೂ ಒಂದು ದಿನದ ಹೊರ ಸಂಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 9 ರಿಂದ 16 ವಯಸ್ಸಿನ 50ಕ್ಕೂ ಅಧಿಕ ಬಾಲಕ ಬಾಲಕಿಯರು ಶಿಬಿರದಲ್ಲಿ ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಹೊರ ಸಂಚಾರ ಮತ್ತು ಪ್ರಕೃತಿ ಸಾಹಸ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಪ್ರಮುಖವಾಗಿ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಮೆಹಂದಿ, ಯೋಗ, ಕ್ರೀಡೆಗಳಾದ ಬಾಲ್ ಬ್ಯಾಂಡ್ಮಿಟನ್, ಚೆಸ್, ಕೊಕೊ ಮತ್ತು ಕೇರಂ ಒಳಗೊಂಡಿರುತ್ತವೆ. ಬಾಲಕ ಮತ್ತು ಬಾಲಕಿಯರು ಶಿಬಿರದ ಮೂಲಕ ವಿವಿಧ ಕೌಶಲಗಳ ಸಮೇತ ಯೋಗ, ಡಾನ್ಸ್ ಮತ್ತೀತತರ ಪಠ್ಯೇತರ ಚಟುವಟಿಕೆಗಳನ್ನು ಕಲಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಿಬಿರಗಳನ್ನು ಆಯೋಜನೆ ಮಾಡುವುದರ ಮೂಲಕ ಮಕ್ಕಳ ಮಾನಸಿಕ, ದೈಹಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಇಲಾಕೆಯ ಮೇಲ್ವಿಚಾರಕಿಯರಾದ ಸುವರ್ಣ ಗುರವ, ರಾಜೇಶ್ವರಿ ಗವಿಮಠ, ಅನುಸೂಯ ರೇಡೆಕರ ಮತ್ತು ಡಾನ್ಸ್ ಮಾಸ್ಟರ ಮಂಜುನಾಥ ಮಾದರ ಇದ್ದರು.
Leave a Comment