ಹಳಿಯಾಳ:- ದಿ.30 ರಂದು ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕಾರ್ಯಕ್ರಮ ವಿಕ್ಷಣೆಗೆ ಹಳಿಯಾಳದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (ಅರ್ಬನ್ ಬ್ಯಾಂಕ್)ವೃತ್ತದಲ್ಲಿ ಬೃಹತ್ ಪರದೆ ಮೂಲಕ ಲೈವ್ ವಿಕ್ಷಣೆಗೆ ಅವಕಾಶ ಮಾಡಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ.
ಈ ಕುರಿತು ಬುಧವಾರ ಸಾಯಂಕಾಲ ಮಾಹಿತಿ ನೀಡಿದ ಅವರು ಮೋದಿಯವರ ಪ್ರಮಾಣ ವಚನವನ್ನು ಸಾವಿರಾರು ಜನರು ಬೃಹತ್ ಪರದೆಯಲ್ಲಿ ಲೈವ್ ವೀಕ್ಷಣೆ ಮಾಡಲು ಎಲ್ಇಡಿಯ ಬೃಹತ್ (ಸ್ಕ್ರೀನ್) ಪರದೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇಲ್ಲಿ ಸರಳ ಸಮಾರಂಭವನ್ನು ಏರ್ಪಡಿಸಲಾಗಿದ್ದು ಹಳೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸೈನಿಕರಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ ಹೆಗಡೆ ಅವರು ಸುಮಾರು 5 ಸಾವಿರ ಮೊತಿಚುರು-ಬುಂದೆ ಲಾಡುಗಳನ್ನು ಮಾಡಿಸಲಾಗಿದ್ದು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುವುದು ಎಂದರು.
Leave a Comment