ಜೋಯಿಡಾ ತಾಲೂಕಿನ ರಾಮನಗರದ ನಾಡ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬುವವರನ್ನು ಡಿವೈಎಸ್,ಪಿ, ಗಿರೀಶ,ಎಸ್,ವಿ, ನೇತೃತ್ವದ ಎಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ,
ಏನಿದು ಪ್ರಕರಣ –
ಕಾಳಿ ಬ್ರೀಗೇಡ ಮುಖ್ಯ ಸಂಚಾಲಕ ರವಿ ರೇಡ್ಕರ ದೂರಿನ ಅನ್ವಯ ರಾಮನಗರದ ನಾಡ ಕಚೇರಿಯಲ್ಲಿ ಶೈಲಾ ಸೋಲೆಕರ ಎಂಬ ಬಡ ಮಹಿಳೆ ತನ್ನ ಗಂಡನ ಕಾಯಿಯೆ ಮತ್ತು ಮಗನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿರುವಾಗ ಹಣ ಇಲ್ಲದೇ ತನ್ನ ಜಮೀನನ್ನು ಭಾಗ ಮಾಡಲು ಕಚೇರಿಗೆ ಬಂದು ಅರ್ಜಿ ಸಲ್ಲಿಸಿದ್ದಳು, ಈ ಕೆಲಸ ಮಾಡಿಕೊಡಬೇಕಾದರೆ ನಾಡ ಕಚೇರಿಯ ಕಂದಾಯ ಅಧಿಕಾರಿ ಎ,ವಿ, ಪಾಟೀಲ್ ತನಗೆ 2000 ರೂ ನೀಡದರೆ ಕೆಲಸ ಮಾಡಿಕೊಡುವುದಾಗಿ ತಿಳಿಸಿದರು, ಬಡ ಮಹಿಳೆ ತನಗಾದ ಅನ್ಯಾಯವನ್ನು ಕಾಳಿ ಬ್ರೀಗೇಡ ಕಾರ್ಯಕರ್ತರಲ್ಲಿ ಮತ್ತು ವಕೀಲರಾದ ಸುನೀಲ್ ದೇಸಾಯಿ ಬಳಿ ಹೇಳಿಕೊಂಡಾಗ ಅವರು ಎಸಿಬಿ ಪೋಲಿಸರಿಗೆ ಸೂಕ್ತ ಮಾಹಿತಿ ನೀಡಿದಾಗ , ಕಾರ್ಯನಿರತರಾದ ಎಸಿಬಿ ಪೋಲಿಸ ತಂಡ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬಾತನನ್ನು ವಿಚಾರಣೆ ನಡೆಸಿ ಬಂದಿಸಿದ್ದಾರೆ.
ಈ ಒಂದು ಕಾರ್ಯಾಚರಣೆಯಲ್ಲಿ ಎಸಿಬಿ ಕಾರವಾರದ ಡಿ,ವೈ,ಎಸ್,ಪಿ,ಗಿರೀಶ,ಪಿ. ಸಿಬ್ಬಂದಿಗಳಾದ ಸದಾಶಿವ ಕಟ್ಟಿಮನಿ, ಎಚ್,ಸಿ,ರಾಜೇಶ ,ಪ್ರಭು,ಪಿ. ಶ್ರೀಕೃಷ್ಣಾ ಬಾಳೆಗೆದ್ದೆ, ಉಷಾ ಗೌಡ, ಮಂಜುನಾಥ ಮಡಿವಾಳ ಇದ್ದರು.
Leave a Comment