ಹಳಿಯಾಳ:- ೨ ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೀರುವ ನರೇಂದ್ರ ಮೋದಿಯವರ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಲು ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದ ಸಂಗೋಳ್ಳಿ ರಾಯಣ್ಣ ( ಅರ್ಬನ್ ಬ್ಯಾಂಕ್) ವೃತ್ತದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದ್ದು ಜನತೆ ಉತ್ಸುಕತೆಯಿಂದ ನೇರ ಪ್ರಸಾರ ವೀಕ್ಷಿಸುತ್ತಿದ್ದಾರೆ.

ಬೃಹತ್ ಪರದೆಯಲ್ಲಿ ಲೈವ್ ಮೂಲಕ ಮೋದಿ ಮಂತ್ರಿ ಮಂಡಲದ ಪ್ರಮಾಣ ವಚಣ ಕಾರ್ಯಕ್ರಮ ವೀಕ್ಷಿಸುತ್ತಿರುವ ಸಾವಿರಾರು ಜನತೆ.
ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆಯನ್ನು ಹಳಿಯಾಳದಲ್ಲಿ ಮಾಡಲಾಗಿದ್ದು ಜನತೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಸಿಡಿಮದ್ದುಗಳು ಬಳಿಕ
5 ಸಾವಿರ ಲಾಡು ಹಂಚಿ ಸಂಭ್ರಮಿಸಿದ ಬಿಜೆಪಿಗರು.
ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ. ಮುಖಂಡರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳ್, ವಿಜಯ ಬೋಬಾಟಿ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಉದಯ ಹೂಲಿ, ಮಂಜುನಾಥ ಪಂಡಿತ, ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೊಜಿ, ಚಂದ್ರಕಾಂತ ಕಮ್ಮಾರ, ಸಂತಾನ ಸಾವಂತ, ವಾಸು ಪೂಜಾರಿ, ಸಂಗೀತಾ ಜಾಧವ ಸೇರಿದಂತೆ ಪ್ರಮುಖರು ಇದ್ದರು.


Leave a Comment