
ಹಳಿಯಾಳ:- ಬೈಕ್ ಮತ್ತು ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಯುವತಿ ಗಂಭಿರವಾಗಿ ಗಾಯಗೊಂಡಿರುವ ದುರ್ಘಟನೆ ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯ ಬಾನಸಗೇರಿ ಗ್ರಾಮದ ಸಮೀಪ ನಡೆದಿದೆ.
ಅಶೋಕ ಅಪ್ಪಯ್ಯಾ ಬನ್ಸೋಡೆ (೫೧) ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ರೈತನಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ
ಮುಂಡಗೋಡದ ನಂದಿಕಟ್ಟಾದಿಂದ ಹಳಿಯಾಳದ ಯಡೋಗಾ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ತಮ್ಮ ಬೈಕ್ ನಲ್ಲಿ ಸಂಬಂಧಿಯಾಗಿರುವ ವಿದ್ಯಾರ್ಥಿನಿ ದಿವ್ಯಾಳನ್ನು ಕರೆದುಕೊಂಡು ಬರುತ್ತಿದ್ದಾಗ ಬಾಣಸಗೇರಿ ಗ್ರಾಮದ ಸಮೀಪ ದುರ್ಘಟನೆ ಸಂಭವಿಸಿದೆ.
ಹಳಿಯಾಳದಿಂದ ಕಲಘಟಗಿಗೆ ತೆರಳುತ್ತಿದ್ದ ಲಾರಿ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಕಾರಣ ಅಪಘಾತದ ರಭಸಕ್ಕೆ ಅಶೋಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಗೆ ಗಂಭಿರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸಗೆ ರವಾನಿಸಲಾಗಿದೆ.
Leave a Comment