• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಾಲಾ-ಕಾಲೇಜಿನಲ್ಲಿ ಮೊಬೈಲ್ ಬ್ಯಾನಗೆ ಸೂಚಿಸಿದ ವಿಪ ಸದಸ್ಯ ಎಸ್ ಎಲ್ ಘೋಟ್ನೇಕರ

June 16, 2019 by Yogaraj SK Leave a Comment

ban mobiles at School meeting BY SL ghotnekar mlc haliyal

ಹಳಿಯಾಳ :- ವಿದ್ಯಾರ್ಥಿಗಳು ತರಗತಿ ಹಾಗೂ ಶಾಲಾ ಆವರಣದಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸ್ವಚತೆಯ ಅರಿವು ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸದ್ಯ ಹಳಿಯಾಳದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಪರಿಮಿತ ಮೊಬೈಲ್ ಬಳಕೆಯಿಂದ ವಿವಿಧ ಅಹಿತಕರ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ದಿನಂಪ್ರತಿ ದೂರುಗಳು ಕೇಳಿ ಬರುತ್ತಿವೆ. ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುವ ಅಗತ್ಯತೆ ಎದುರಾಗಿದೆ.
ಶಾಲಾ ಕಾಲೇಜಿನ ಆವರಣದಲ್ಲಿ ಕಡ್ಡಾಯವಾಗಿ ಔಷಧಿಯುಕ್ತ ಸಸಿಗಳನ್ನು ನೆಡಲು ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಮುಂದಾಗಬೇಕೆಂದು ಸಲಹೆ ನೀಡಿದ ಘೋಟ್ನೇಕರ ಅವರು ಇತ್ತಿಚಿನ ದಿನಗಳಲ್ಲಿ ಮೊಬೈಕ್ ಬಳಕೆಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರೀತಿ, ಪ್ರೇಮ ಪ್ರಕರಣಗಳ ದೂರುಗಳು ಸಾಕಷ್ಟು ಕೇಳಿ ಬರುತ್ತಿದ್ದು ಪಾಲಕರು ತಮ್ಮ ಮಕ್ಕಳನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಬೇಕೆಂದು ಕಿವಿ ಮಾತು ಹೇಳಿದರು.
ಬಾಲಕಿಯರು ಶಾಲೆಗೆ ತೆರಳುತ್ತೇನೆಂದು ಪಾಲಕರಿಗೆ ತಿಳಿಸಿ ಶಾಲೆಯಿಂದ ಬೇರೊಬ್ಬರ ದ್ವಿಚಕ್ರ ವಾಹನದ ಮೇಲೆ ಮುಖಕ್ಕೆ ಮುಸುಕು ಹಾಕಿಕೊಂಡು ತೆರಳುತ್ತಿರುವುದು ಸಹ ಕೇಳಿಬರುತ್ತಿದೆ ಎಂದ ಅವರು ಈ ಬಗ್ಗೆ ಪಾಲಕರು ಸಹ ಎಚ್ಚರಿಕೆ ವಹಿಸುವ ಮೂಲಕ ಮುಂದಾಗುವ ಘಟನೆಗಳಿಗೆ ಶಿಕ್ಷಕರು ಮತ್ತು ಪಾಲಕರು ಮುನ್ನೆಚ್ಚರಿಕೆ ವಹಿಸಬೇಕೆಂದರು.
ಪಟ್ಟಣದಲ್ಲಿ ಇತ್ತಿಚೇಗೆ ಡಿಜೆ, ಡಾಲಬಿಯಂತಹ ಭಾರಿ ಶಬ್ದ ಮಾಡುವ ಸಂಗೀತ ಧ್ವನಿ ವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಮಾಡಲಾಗುತ್ತಿದ್ದು ಇದರಿಂದ ಸಾರ್ವಜನೀಕರು ಹಾಗೂ ಹಿರಿಯ ವಯಸ್ಸಿನವರು, ಎದೆ ಸಂಬಂಧಿ ಕಾಯಿಲೆಯವರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಕಾರಣ ಕೂಡಲೇ ಎಲ್ಲ ಸಮಾಜದ ಮುಖಂಡರ ಸಭೆ ನಡೆಸಿ ಇನ್ನು ಮುಂದೆ ಹಳಿಯಾಳದಲ್ಲಿ ಡಿಜೆ ಮತ್ತು ಡಾಲಬಿ ಸಂಗೀತ ಧ್ವನಿವರ್ಧಕಗಳನ್ನು ಬಳಸಬಾರದೆಂದು ನಿರ್ಣಯಿಸಬೇಕೆಂದರು.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಮಾತನಾಡಿ ಪ್ರತಿಯೊಂದು ಶಾಲಾವರ್ಗ ಹಾಗೂ ಶಾಲಾ ಆವರಣದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾವನ್ನು ಅಳವಡಿಸಿ ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದರು. ವಿದ್ಯಾರ್ಥಿಗಳು ತಾಂತ್ರಿಕತೆಗೆ ಬಹಳಷ್ಟು ಆಕರ್ಷಕರಾಗಿದ್ದು ಪ್ರಕೃತಿಯ ಬಗ್ಗೆ ಸಹ ತಿಳುವಳಿಕೆ ನೀಡಲು ಮುಂದಾಗಿ ಎಂದು ಶಾಲೆಯವರಿಗೆ ಹಾಗೂ ಪಾಲಕರಿಗೆ ತಹಶೀಲ್ದಾರ್ ಕರೆ ನೀಡಿದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ, ಬಿಇಓ ಸಮೀರ್ ಅಹಮ್ಮದ್ ಮುಲ್ಲಾ, ಪಿ.ಎಸ್.ಐ. ಅನಂದ ಮೂರ್ತಿ ಇದ್ದರು. ಪುರಸಭೆ ಇಂಜಿನೀಯರ್ ಹರೀಶ ಹಾಗೂ ಪಟ್ಟಣದ ಎಲ್ಲ ಶಾಲಾ ಮುಖ್ಯೋಪಾಧ್ಯಾಯರು -ಶಿಕ್ಷಕರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ban mobiles at School meeting BY SL ghotnekar mlc haliyal, campus, compulsory in school, Dolby, law and order, modus operandi, music, noise pollution, school-college governing body to plant medicinal saplings, sound amplifiers such as DJ, students in school Mobile Banking in College Edhisi, unlimited mobile usage, various unpleasant incidents, ಅಪರಿಮಿತ ಮೊಬೈಲ್ ಬಳಕೆ, ಆವರಣದಲ್ಲಿ ಕಡ್ಡಾಯವಾಗಿ, ಔಷಧಿಯುಕ್ತ ಸಸಿಗಳನ್ನು ನೆಡಲು ಶಾಲಾ-ಕಾಲೇಜು ಆಡಳಿತ ಮಂಡಳಿ, ಡಾಲಬಿಯಂತಹ ಭಾರಿ ಶಬ್ದ ಮಾಡುವ, ಡಿಜೆ, ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ, ವಿದ್ಯಾರ್ಥಿಗಳಲ್ಲಿ ಕಾನೂನು ಸುವ್ಯವಸ್ಥೆ, ವಿಧಾನಸೌಧದ ಸಭಾಂಗಣm, ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅಭಿಪ್ರಾಯ, ವಿವಿಧ ಅಹಿತಕರ ಘಟನೆ, ಶಬ್ದ ಮಾಲಿನ್ಯ, ಶಾಲಾ ಕಾಲೇಜಿನ, ಶಾಲಾ-ಕಾಲೇಜಿನಲ್ಲಿ ಮೊಬೈಲ್ ಬ್ಯಾನಗೆ, ಸಂಗೀತ ಧ್ವನಿ ವರ್ಧಕಗಳ ಮೂಲಕ, ಸೂಚಿಸಿದ, ಸ್ವಚತೆಯ ಅರಿವು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...