• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯುವಕರು ಕೃಷಿ ವ್ಯವಸಾಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ‌ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಗೌರವ ಸಿಗಬೇಕಿದೆ- ಸಚಿವ ದೇಶಪಾಂಡೆ.

June 25, 2019 by Yogaraj SK Leave a Comment

RV deshpande minister rinda VIVIDHA falanubhavigalige cheq and yantra vitarane

ಹಳಿಯಾಳ:- ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ, ಯುವಕರು ವ್ಯವಸಾಯದಲ್ಲಿ ನಿರಾಸಕ್ತಿ ತೊರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಕರು ಕೃಷಿ-ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಗೌರವವು ಸಿಗಬೇಕಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಟ್ಟರು.
ಕಂದಾಯ, ಕೃಷಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿವಿಧಾನಸೌಧದ ಸಭಾ ಭವನದಲ್ಲಿ ನಡೆದ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ, ಕೃಷಿ ಯಂತ್ರೋಪಕರಣಗಳ ವಿತರಣೆ, ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಗಳ ಜೀರ್ಣೋಧ್ದಾರಕ್ಕಾಗಿ 2018-19ನೇ ಸಾಲಿಗೆ ಮಂಜೂರಾದ 10 ದೇವಸ್ಥಾನಗಳಿಗೆ ಚೆಕ್ ವಿತರಣೆ ಮತ್ತು ತರಬೇತಿ ಪಡೆದು ಉತ್ತೀರ್ಣರಾದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಸಮಾರಂಭವನ್ನು ಉಧ್ಘಾಟಿಸಿ ಸಚಿವರು ಮಾತನಾಡಿದರು.
18 ವರ್ಷದಲ್ಲಿ 4 ವರ್ಷ ಮಾತ್ರ ಮಳೆಗಾಲವಿದ್ದರೇ 14 ವರ್ಷ ಬರಗಾಲವನ್ನು ಅನುಭವಿಸಲಾಗಿದೆ. ಸದ್ಯ ಬರಗಾಲ, ಅತಿವೃಷ್ಠಿಯ ಪರಿಣಾಮ ದೇಶದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಮಗಳನ್ನು ಬಿಟ್ಟು ನಗರಗಳತ್ತ ಮುಖ ಮಾಡಿರುವ ಯುವ ಜನಾಂಗವನ್ನು ಮತ್ತೇ ಕೃಷಿಯತ್ತ ಆಕರ್ಷಿಸಲು ನೂತನ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿದೆ ಎಂದರು.
ಸಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯಂತ ಕಡಿಮೇ ಸಮಯ ಹಾಗೂ ಶ್ರಮದಲ್ಲಿ ಹೆಚ್ಚು ಇಳುವರಿಗಳನ್ನು ಪಡೆದು ರೈತರು ಆರ್ಥಿಕವಾಗಿ ಸದೃಢರಾಗಲು ಕೃಷಿಯನ್ನು ಇನ್ನಷ್ಟು ಲಾಭದಾಯಕವನ್ನಾಗಿ ಮಾಡಲು ಸರ್ಕಾರವು ಚಿಂತನೆ ನಡೆಸಿದೆ ಎಂದ ದೇಶಪಾಂಡೆ ಕೃಷಿ ಭೂಮಿಗಳು ಇತ್ತೀಚಿನ ದಿನಗಳಲ್ಲಿ ಕಾಣೆಯಾಗುವುದರ ಮೂಲಕ ನಿವೇಶನಗಳಾಗಿ ಮಾರ್ಪಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಗ್ರೀನ್ ಬೆಲ್ಟ್ ಅಡಿಯಲ್ಲಿ ಬರುವ ಜಮೀನುಗಳು ಸಹ ಬಡಾವಣೆಗಳಾಗಿ ಮಾರಾಟವಾಗುತ್ತಿವೆ.
ರೈತರಿಗೆ ಕೃಷಿ ಹೊಂಡಗಳ ನಿರ್ಮಾಣ ಮತ್ತು ಕೆರೆಗಳನ್ನು ಹೊಳೆತ್ತೆವುದರ ಮೂಲಕ ಅಂತÀರ್ಜಲದ ಪ್ರಮಾಣ ಹೆಚ್ಚಳಕ್ಕೆ ಸಹಾಯಧನ ನೀಡಲಾಗುತ್ತಿದೆ. ಮಾನವನು ದಿನಗಳು ಕಳೆದಂತೆ ಸ್ವಾರ್ಥಿಯಾಗಿದ್ದರಿಂದ ಪರಿಸರವು ಸಹ ತನ್ನ ಸಮತೋಲನ ಕಳೆದುಕೊಂಡ ಪರಿಣಾಮ ನೇರವಾಗಿ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಹಸ್ತ ಪ್ರತಿಯನ್ನು ಸಹ ಅನಾವರಣಗೊಳಿಸಲಾಯಿತು.ಅಲ್ಲದೇ ಅರ್ಹ ರೈತರಿಗೆ ಸಹಾಯಧನದ ರೂಪದಲ್ಲಿ ಕಲ್ಟಿವೇಟರ್ ಹಾಗೂ ರೋಟೆವೇಟರ್‍ಗಳನ್ನು ಹಸ್ತಾಂತರಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತರಬೇತಿ ಪಡೆದ 12 ಮಹಿಳೆಯರಿಗೆ ಹೂಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಗಳ ಜೀಣೋದ್ದಾರಕ್ಕೆ 2018-19 ಸಾಲಿಗೆ ಮಂಜೂರಾದ 10 ಚೆಕ್‍ಗಳನ್ನು ದೇವಸ್ಥಾನದ ಟ್ರಸ್ಟ್ ಕಮಿಟಿಗಳಿಗೆ ಹಸ್ತಾಂತರಿಸಲಾಯಿತು.
ವೇದಿಕೆ ಮೇಲೆ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೋರ್ವೆಕರ, ಮಹೇಶ್ರೀ ಮಿಶ್ಯಾಳಿ, ತಹಶೀಲದಾರ ವಿದ್ಯಾಧರ ಗುಳಗುಳಿ,ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಅಕ್ರಮ ಸಕ್ರಮ ಸಮಿತಿಯ ಸುಭಾಸ ಕೋರ್ವೆಕರ, ತಾಪಂ ಸದಸ್ಯ ದೇಮಾಣಿ ಶಿರೋಜಿ, ಬಾಳು ಪಾಟೀಲ್, ಪುರಸಭೆ ಸದಸ್ಯರಾದ ಶಂಕರ ಬೆಳಗಾಂವಕರ, ಸಮೀನಾಬಾನು, ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: RV deshpande minister rinda VIVIDHA falanubhavigalige cheq and yantra vitarane, ಕೃಷಿ ಅಭಿಯಾನಕ್ಕೆ ಚಾಲನೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಗೌರವ ಸಿಗಬೇಕಿದೆ- ಸಚಿವ ದೇಶಪಾಂಡೆ., ಕೃಷಿ ಪ್ರಧಾನ ದೇಶವಾಗಿರುವ ಭಾರತ, ಕೃಷಿ ಯಂತ್ರೋಪಕರಣಗಳ ವಿತರಣೆ, ಕೃಷಿ-ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ತರಬೇತಿ ಪಡೆದು ಉತ್ತೀರ್ಣರಾದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ದೇವಸ್ಥಾನಗಳಿಗೆ ಚೆಕ್ ವಿತರಣೆ, ಧಾರ್ಮಿಕ ದತ್ತಿ ಇಲಾಖೆ, ಯುವಕರು ಕೃಷಿ ವ್ಯವಸಾಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ‌, ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಗೌರವವು ಸಿಗಬೇಕಿದೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...