• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಬೆಟೆಯಾಡಿದ ಹಳಿಯಾಳದ ಸೂರಜ್ ಅಣ್ಣಿಕೇರಿ

July 10, 2019 by Yogaraj SK Leave a Comment

kusti international level 3rd place, Suraj annikeri

ಹಳಿಯಾಳ:- ಕಜಕಿಸ್ಥಾನ ದೇಶದಲ್ಲಿ ನಡೆದ 17 ವರ್ಷ ಒಳಗಿನ ಬಾಲಕರ 2019ರ “ಜೂನಿಯರ್ ಏಶಿಯನ್ ಚಾಂಪಿಯನ್‍ಶಿಪ್”ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಹಳಿಯಾಳದ ಗ್ರಾಮೀಣ ಕುಸ್ತಿಪಟು ಸೂರಜ ಸಂಜು ಅನ್ನಿಕೇರಿ ಸ್ಪರ್ದೆಯಲ್ಲಿ 3 ನೇ ಸ್ಥಾನ ಪಡೆದು ತಾಲೂಕು ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾನೆ.
ಕಳೆದ ಮೇ ತಿಂಗಳಿನಲ್ಲಿ ಹರಿಯಾಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೇಯಲ್ಲಿ ಬಾಲಕರ ಜೂನಿಯರ್ ಕುಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಕುಸ್ತಿಗೆ ಸೂರಜ ಆಯ್ಕೆಯಾಗಿದ್ದರು.
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದ ರಹವಾಸಿಯಾಗಿರುವ ಉದಯೋನ್ಮುಖ ಕುಸ್ತಿ ಪಟು ಸೂರಜ ಅನ್ನಿಕೇರಿ ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಕುಸ್ತಿ ಪಟುವು ಆಗಿರುವ ಸಂಜು ಅನ್ನಿಕೇರಿ ಮಗನಾಗಿದ್ದಾನೆ. ಸೂರಜ ಪಟ್ಟಣದ ವಿಡಿ ಹೆಗಡೆ ವಿದ್ಯಾಲಯದಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸದ್ಯ ಬಳ್ಳಾರಿಯ ಜೆಎಸ್‍ಡಬ್ಲೂ ತೊರಂಗಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸೂರಜನಿಗೆ ತರಬೇತಿದಾರರಾದ ಟಿ ಮಂಜಪ್ಪ, ಎಸ್ ಶ್ರೀನಿವಾಸ ಹಾಗೂ ಶಂಕರಪ್ಪ ತರಬೇತಿ ನೀಡುತ್ತಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ರಾಜ್ಯ ಕುಸ್ತಿ ಸಂಘ, ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ವಿಡಿ ಹೆಗಡೆ ಶಿಕ್ಷಣ ಸಂಸ್ಥೆಯ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಆಗಿರುವ ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಶಿಕ್ಷಕರು ಹಾಗೂ ಹಳಿಯಾಳ ಪೋಲಿಸ್ ಇಲಾಖೆಯವರು ಅಭಿನಂದನೆ ಸಲ್ಲಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 17 ವರ್ಷ ಒಳಗಿನ ಬಾಲಕರ, 2019ರ, kusti international level 3rd place, Suraj annikeri, ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ, ಕಜಕಿಸ್ಥಾನ ದೇಶದಲ್ಲಿ, ಗ್ರಾಮೀಣ ಕುಸ್ತಿಪಟು ಸೂರಜ ಸಂಜು ಅನ್ನಿಕೇರಿ ಸ್ಪರ್ದೆ, ಜೂನಿಯರ್ ಏಶಿಯನ್ ಚಾಂಪಿಯನ್‍ಶಿಪ್, ಪಿಯುಸಿ ಕಲಾ ವಿಭಾಗ, ಪೋಲಿಸ್ ಇಲಾಖೆ, ಬೆಟೆಯಾಡಿದ, ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ, ವಿಡಿ ಹೆಗಡೆ ವಿದ್ಯಾಲ, ಹಳಿಯಾಳದ ಸೂರಜ್ ಅಣ್ಣಿಕೇರಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...