ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ.ಎ. ಅಂತಿಮ ತರಗತಿಯ ಪರೀಕ್ಷೆಗೆ ಹಾಜರಾದ 34 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿನ ಫಲಿತಾಂಶ ಶೇಕಡಾ 88.24 ಆಗಿರುತ್ತದೆ.
19 ಡಿಸ್ಟಿಂಕ್ಷನ್, 6 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿ ಕುಮಾರಿ ಸಂಗೀತಾ ನಾಯ್ಕ (88.15%) ಪ್ರಥಮ, ಹಾಗೂ ಕುಮಾರಿ ಅಂಕಿತಾ ನಾಯ್ಕ (84.89%) ದ್ವಿತೀಯ ಹಾಗೂ ಕುಮಾರಿ ಲಿಪಿ ಮಹೇಶ ಭಂಡಾರಿ (81.95%) ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯವರು ಪ್ರಾಚಾರ್ಯರು ಹಾಗೂ ಅಧ್ಯಾಪಕರು ಅಭಿನಂದಿಸಿರುತ್ತಾರೆ.
Leave a Comment