
ಹಳಿಯಾಳ :- ಕಸ ಹಾಗೂ ಘನತ್ಯಾಜ್ಯ ವಿಲೇವಾರಿಯಲ್ಲಿ ಮಾದರಿ ಕಾರ್ಯ ನಿರ್ವಹಿಸುತ್ತಾ ಪ್ರಶಸ್ತಿಗೂ ಭಾಜನವಾಗಿರುವ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆಯ ಅಧಿಕಾರಿಗಳನ್ನೊಳಗೊಂಡ ಪೌರಕಾರ್ಮಿಕರ ತಂಡ ಭೇಟಿ ನಿಡಿ ಅಧ್ಯಯನ ನಡೆಸಿ, ಶ್ಲಾಘನೆ ವ್ಯಕ್ತಪಡಿಸಿದೆ.
ಹಳಿಯಾಳ ಪಟ್ಟಣದ ಪುರಸಭೆಗೆ ಭೆಟಿ ನೀಡಿದ ಅಣ್ಣಿಗೇರಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಆರ್‍ಡಿ ಗೊಂಡಕರ, ಪರಿಸರ ಅಭಿಯಂತರ ಚನ್ನಪ್ಪಾ ಅಂಗಡಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕಿ ಕೆವಿ ಶಾರದಾ ನೇತೃತ್ವದಲ್ಲಿ 30 ಪೌರಕಾರ್ಮಿಕರ ತಂಡ ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಹಳಿಯಾಳದ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವ ಹಾಗೂ ಸಾರ್ವಜನೀಕರ ಸಹಕಾರ, ಅವರೊಂದಿಗಿನ ಒಡನಾಟಗಳ ಕುರಿತು ಇಲ್ಲಿಯ ಪುರಸಭೆ ಅಧಿಕಾರಿಗಳು ಹಾಗೂ ಪಟ್ಟಣದ ಜನರಿಂದ ಮಾಹಿತಿ ಪಡೆದರು.
ಬಳಿಕ ಪಟ್ಟಣದ ಅಂಚಿನಲ್ಲಿರುವ ಬಾಮಣಿಕೊಪ್ಪದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ್ಕೆ ತೆರಳಿದ ಈ ತಂಡ ಘನ ತಾಜ್ಯ ವಿಲೇವಾರಿ ಘಟಕದಲ್ಲಿಯ ಕಾರ್ಯವೈಖರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಳಿಯಾಳ ಪುರಸಭೆ ಪರಿಸರ ಅಭಿಯಂತರರಾದ ಬಿಎಸ್ ದರ್ಶಿತಾ, ಪುರಸಭೆ ಸಿಬ್ಬಂದಿ ಸಂಜಯ ಮುಳೆ ಇದ್ದು ಮಾಹಿತಿ ನೀಡಿದರು.
Leave a Comment