
ಹಳಿಯಾಳ :- ಪಟ್ಟಣದ ರಹವಾಸಿಯಾದ ಖ್ಯಾತ ಕಲಾವಿದ ವಿಷ್ಣು ಪ ಘಟಕಾಂಬ್ಳೆ (೭೦) ತಮ್ಮ ನಿವಾಸದಲ್ಲಿ ನಿಧನರಾದರು.
ಕಳೆದ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ವಿಷ್ಣು ಅವರು ಹಳಿಯಾಳದ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ ಅವರ ತಂದೆಯಾಗಿದ್ದಾರೆ.ಇವರು 2ಗಂಡು ಮತ್ತು 3ಹೆಣ್ಣು ಮಕಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, ರಾಜು ಧೂಳಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
*ವಿಶೇಷತೆ* ವಿಷ್ಣು ಅವರ ವಿಶೇಷತೆ ಎಂದರೇ ಮೊಹರಂ ಹಬ್ಬದ ಸಂದರ್ಭದಲ್ಲಿ ಹುಲಿವೇಷ ಬಿಡಿಸುವ ವಿಶೇಷ ಕಲೆಯನ್ನು ಕರಗತ ಮಾಡಿಕೊಂಡಿದ್ದ ಇವರ ಬಳಿ ರಾಜ್ಯದ ವಿವಿಧ ಭಾಗಗಳಿಂದ ಹುಲಿವೇಷ ಬಿಡಿಸಿಕೊಳ್ಳಲು ಜನ ಆಗಮಿಸುತ್ತಿದ್ದುದು ವಿಶೇಷವಾಗಿತ್ತು….

Leave a Comment