
ಹಳಿಯಾಳ:- ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿರುವ ಸುಮಾರು 20ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿದ ಹಳಿಯಾಳ ಪುರಸಭೆಯವರು ಸುಮಾರು 15.5ಕೆಜಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ ವಶಕ್ಕೆ ಪಡೆದು 6600 ರೂ. ದಂಡ ವಿಧಿಸಿದ್ದು ಇನ್ನೂ ಮುಂದೆ ಪ್ಲಾಸ್ಟಿಕ್ ಬಳಸಿದರೇ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 20 ದಿನಗಳಿಂದ ಮೇಲಿಂದ ಮೇಲೆ ಪುರಸಭೆಯು ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುತ್ತಿದೆ. ಈವರೆಗೆ ಸುಮಾರು 50 ಕೆಜಿಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡಿರುವ ಪುರಸಭೆಯವರು 30 ಸಾವಿರಕ್ಕೂ ಅಧಿಕ ದಂಡವನ್ನು ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಅಭಿಯಂತರರಾದ ಬಿಎಸ್ ದರ್ಶಿತಾ, ಇಂಜೀನಿಯರ್ ಹರೀಶ ಗೌಡಾ, ಅಶೋಕ ಸಾಳೆನ್ನವರ, ಸಿಬ್ಬಂದಿ ಯಲ್ಲಪ್ಪಾ ತಳವಾರ, ಟೋಸುರ, ಮಂಜುನಾಥ ಇತರರು ಇದ್ದರು.
Leave a Comment