
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ದೇವಸ್ಥಾನಗಳ-ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗಾಗಿ 33 ಲಕ್ಷರೂ.ಗಳ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ವಿ ದೇಶಪಾಂಡೆ ಅವರು ಮಂಜೂರಿ ಮಾಡಿಸಿದ್ದಾರೆಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಲವಾರು ಧಾರ್ಮಿಕ ಸಂಸ್ಥೆಯ ಮುಖಂಡರು ಸಚಿವರಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಿ ಸರ್ಕಾರದಿಂದ ಈ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಗ್ರಾಮದ ಲಕ್ಷ್ಮೀ ದೇವಸ್ಥಾನ-4ಲಕ್ಷ, ಬೆಳವಟಗಿ ಗ್ರಾಮದ ಮಾರಿಕಾಂಬಾ ದೇವಸ್ಥಾನ-4ಲಕ್ಷ, ಕ್ಯಾತನಗೇರಾ ಗ್ರಾಮದ ಲಕ್ಷ್ಮೀ ದೇವಸ್ಥಾನ-3ಲಕ್ಷ, ಸಂಕನಕೊಪ್ಪ ಗ್ರಾಮದ ಮಾರುತಿ ದೇವಸ್ಥಾನ-4 ಲಕ್ಷ, ಗುಂಡೊಳ್ಳಿಯ ಕಾಳಿಕಾ ದೇವಸ್ಥಾನ-2ಲಕ್ಷ, ಹೊಡಹಡಗಲಿ ಗ್ರಾಮದ ಜೈ ಹನುಮಾನ ಆರಾಧನಾ ಟ್ರಸ್ಟ್ ಕಮೀಟಿಗೆ 3ಲಕ್ಷರೂ, ಅರ್ಲವಾಡ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ 2 ಕ್ಷರೂ.
ತಟ್ಟಿಹಳ್ಳ ಗ್ರಾಮದ ವಿಠ್ಠಲರುಕ್ಮಾಯಿ ದೇವಸ್ಥಾನಕ್ಕೆ 2ಲಕ್ಷ ರೂ, ಭಾಗವತಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ 1ಲಕ್ಷರೂ, ಅಂಕೋಲಾ ತಾಲೂಕಿನ ಬೆಳಂಬಾರದ ತಾಳೆಬೈಲಿನ ನರಸಿಂಹ ದೇವಸ್ಥಾನಕ್ಕೆ 2ಲಕ್ಷರೂ, ಶಿರಸಿ ತಾಲೂಕಿನ ಬಂಡಲ ಗ್ರಾಪಂನ ಬಡಗಿ ಗ್ರಾಮದ ಕಲ್ಲೇಶ್ವರ ದೇವಸ್ಥಾನಕ್ಕೆ 1ಲಕ್ಷರೂ, ಕುಮಟಾ ತಾಲೂಕಿನ ದಿವಗಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ 3 ಲಕ್ಷ ರೂ ಹಾಗೂ ಹೊಳೆಗದ್ದೆಯ ಕಣ್ಣೆಮ್ಮ(ಪಂಚಕನ್ಯೆ) ತಾಶಿಬಿರಪ್ಪಾ ದೇವಸ್ಥಾನಕ್ಕೆ 2 ಲಕ್ಷ ರೂ. ಮಂಜೂರಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.
Leave a Comment