
ಹಳಿಯಾಳ:- “ಆರೋಗ್ಯವೆ ಭಾಗ್ಯ” ವಾಗಿದ್ದು ಸುಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಮತ್ತು ಶುದ್ದ ಕುಡಿಯುವ ನೀರಿನ ಬಳಕೆಯನ್ನು ಮಾಡುವಂತೆ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಹೇಳಿದರು.
ಕೆನರಾ ಬ್ಯಾಂಕ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ ತಾಲೂಕಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಹಳಿಯಾಳ ವತಿಯಿಂದ ಸ್ವಸಹಾಯ ಸಂಘಗಳಿಗೆ ಹಮ್ಮಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಕ್ಷೇತ್ರ ಮೆಲ್ವೀಚಾರಕಿ ರಾಜೇಶ್ವರಿ ಗವಿಮಠ ಮಾತನಾಡಿ ಮಕ್ಕಳ ಉತ್ತಮ ಭವಿಷ್ಯವೆ ಭಾರತದ ಭವಿಷ್ಯ ಎಂದು ತಿಳಿಸಿ, ಇಲಾಖೆಯ ಸೌಲಭ್ಯಗಳಾದ ಪೂರಕ ಪೌಷ್ಠಿಕ ಆಹಾರ, ಕಿಶೋರಿ ಶಕ್ತಿ ಯೋಜನೆ, ಪ್ರಧಾನ ಮಂತ್ರ ಮಾತೃವಂದನಾ ಯೋಜನೆ, ಪ್ರಾಯಪೂರ್ವ ಬಾಲಕಿಯರ ಯೋಜನೆ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಯೊಜನಾಧಿಕಾರಿ ಸಂತೋಷ ಪರೀಟ ಮಾತನಾಡಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವತಿಯಿಂದ ನೀಡುತ್ತಿರುವ ಸ್ವ-ಉದ್ಯೋಗ ತರಬೇತಿಯ ಜೋತೆಗೆ ಗ್ರಾಮೀಣ ಭಾಗದ ಜನರಿಗೆ ವ್ಯಕ್ತಿತ್ವ ವಿಕಸನಗೊಳಿಸಲು ಅನೇಕ ಮಾಹಿತಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಮುದಾಯ ಸಂಘಟಕ ಸಂತೋಷ ಸಿದ್ನೇಕೊಪ್ಪ, ಅಂಗನವಾಡಿ ಶಿಕ್ಷಕಿಯರಾದ ಬ್ರೀಜೇಟಾ ಬ್ರಗಾಂಝಾ, ಮಂಜೂಳಾ ವಡ್ಡರ, ಸುಜಾತಾ ಮತ್ತು ಮೊಂತಿ ಡಿಸೋಜಾ ಇದ್ದರು.
Leave a Comment