
ಹೊನ್ನಾವರ , ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಉತ್ತಮ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ಸಂಸ್ಕøತ ಶಿಕ್ಷಕರಿಂದ ಸಂಸ್ಕಾರಯುಕ್ತ ಸಮಾಜನಿರ್ಮಾಣ ಸಾಧ್ಯ. ಸಂಸ್ಕøತ ಶಿಕ್ಷಕರು ವಿಶ್ವಮಾನ್ಯರಾಗಿ ಜಗತ್ತನ್ನು ಬೆಳಗಬೇಕು ಎಂದು ಪ.ಪೂ. ಮಾರುತಿ ಗುರೂಜಿಯವರು ನುಡಿದರು. ಅವರು ಬಂಗಾರಮಕ್ಕಿಯಲ್ಲಿ ಸಂಸ್ಕøತ ವಿಶ್ವವಿದ್ಯಾಲಯ, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಂಸ್ಕøತ ಭಾರತೀ ಸಹಯೋಗದಿಂದ ಆಯೋಜಿಸಲ್ಪಟ್ಟ ಸಂಸ್ಕøತ ಶಿಕ್ಷಕರ ಪುನಃಶ್ಚೇತನ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಅನುಗ್ರಹಿಸಿದರು.
ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜಾತಿ-ಮತ-ಪಂಥ ತೊರೆದು ಸಂಸ್ಕøತಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ದೇಶಾಭಿಮಾನ, ಭಾಷಾಭಿಮಾನದಿಂದ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು ಎಂದು, ಸರ್ವರ ಹಿತ ಮಾನವನ ಮೊದಲ ಮತ ಆಗಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ Àನಂತರ ವಿಶ್ರಾಂತ ಕುಲಪತಿ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಪುನಃಶ್ಚೇತನ ಶಿಬಿರದಿಂದ ಶಿಕ್ಷಕರ ಪರಸ್ಪರ ಚಿಂತನೆ, ಚರ್ಚೆ ಮೂಲಕ ಹೊಸ ವಿಚಾರತರಂಗಗಳು ಮೂಡಿ ಬರುತ್ತವೆ, ತನ್ಮೂಲಕ ಶಿಕ್ಷಕರ ನವೋತ್ಸಾಹ ವರ್ಧನೆಗೆ ಈ ಚಿಂತನೆ ಪರಿಣಾಮಕಾರಿಯಾಗುತ್ತದೆ ಎಂದರು. ವಿಶ್ವವಿದ್ಯಾಲಯದ ಈ ಕ್ರಮ ಆಂತರಂಗಿಕ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲು ಎಂದರು.
ಸಂಸ್ಕøತ ನಿರ್ದೇಶನಾಲಯದ ನಿರ್ದೇಶಕರಾದ ಡಾ|| ಪ್ರಕಾಶ ಪಾಗೋಜಿ ಮಾತನಾಡಿ ವಿಶ್ವವಿದ್ಯಾಲಯದ ಪ್ರಗತಿಯ ಹೆಜ್ಜೆಗಳನ್ನು ವಿವರಿಸುತ್ತಾ, ಪಾಠಶಾಲಾ ಶಿಕ್ಷಕರ ಪೂರ್ವ ವ್ಯವಸ್ಥೆ, ಈಗಿನ ಬದಲಾವಣೆ, ಸರ್ವರೂ ತಮ್ಮ ಕರ್ತವ್ಯಪಾಲನೆಯಲ್ಲಿ ಚ್ಯುತಿ ಬರದ ರೀತಿಯಲ್ಲಿ ಸಂಸ್ಕøತ ಅಭಿವೃದ್ಧಿಗೆ ಶ್ರಮವಹಿ¸ ಬೇಕೆಂದ್ಟುರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ|| ಗಿರೀಶ್ಚಂದ್ರ ಮಾತನಾಡಿ, ಪವಿತ್ರವಾದ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಸ್ಕಾರ-ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯ ಸಂಸ್ಕøತ ಶಿಕ್ಷಕರದ್ದು. ನಿರಂತರ ಚಿಂತನೆ, ಅಧ್ಯಯನ, ಅಧ್ಯಾಪನ, ಸಂಸ್ಕøತ ವಾತಾವರಣ ನಿರ್ಮಾಣ ಇವೆಲ್ಲವೂ ಭಕ್ತಿ-ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಾಧ್ಯ ಎಂದು ನುಡಿದರು. ಸಂಸ್ಕøತ ಭಾಷೆಯ ಮೂಲಕ ಆತ್ಮಗೌರವ ಹೇಗೆ ವೃದ್ಧಿಸುತ್ತದೆ ಎಂದು ಉದಾಹರಣೆ ಮೂಲಕ ವಿವರಿಸಿದರು.
] ಕರ್ನಾಟಕ ಉತ್ತರ ಪ್ರಾಂತಾಧ್ಯಕ್ಷ ವಿದ್ವಾನ್ ವಿ. ಜಿ. ಹೆಗಡೆ ಗುಡ್ಗೆ, ಮಾತನಾಡಿ ಈ ಸಂಸ್ಕøತ ಪುನಃಶ್ಚೇತನ ಶಿಬಿರ ಜ್ಞಾನದ ಪ್ರತೀಕ. ಜ್ಞಾನಯಜ್ಞದಲ್ಲಿ ಪಾಲ್ಗೊಂಡು ಸಂಸ್ಕøತ ವಾತಾವರಣ ನಿರ್ಮಾಣ ಮಾಡುವ ಮೂಲಕ ಜ್ಞಾನಗಂಗೆ ಸರ್ವತ್ರ ಹರಿಯಲಿ ಎಂದು ನುಡಿದು,
ಮಾರ್ಮಿಕವಾಗಿ ಎಲ್ಲರನ್ನೂ ಸ್ವಾಗತಿಸಿದರು. ಮಹಾಂತೇಶ ಗದಗ ಪ್ರಾರ್ಥನಾಗೀತೆ ಹಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು. ಗಂಗಾಧರಯ್ಯ ವಂದನಾರ್ಪಣೆಗೈದರು.
ಈ ಸಂಸ್ಕøತ ವರ್ಗದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ 160 ಜನ ಪಾಠಶಾಲಾ ಶಿಕ್ಷಕರು ಭಾಗವಹಿಸಿದ್ದರು. ಸಂಸ್ಕøತ ಭಾರತಿಯ ಅಖಿಲ ಭಾರತೀಯ ಪ್ರಮುಖರು ಪ್ರಶಿಕ್ಷಕರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಂಗಾರಮಕ್ಕಿಯ ವೇದಪಾಠಶಾಲಾ ವಿದ್ಯಾರ್ಥಿಗಳು ವೇದಘೋಷ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ|| ಭಾರತಿ ಹೆಗಡೆ ಗುಡ್ಗೆ-ಹಾರೂರಿ, ಧಾರವಾಡ ಇವರು ರಚಿಸಿದ ಉಪನಿಷತ್ ಕಥಾಸಾರ ಪುಸ್ತಕದ ಲೋಕಾರ್ಪಣ ಕಾರ್ಯಕ್ರಮ ನಡೆಯಿತು.
Leave a Comment