
ಹೊನ್ನಾವರ , ಸರ್ಕಾರಿ ನೌಕರರು ಜನಪರ ಕಾಳಜಿಯನ್ನು ಹೊಂದಿದ್ದರೆ ತಮ್ಮ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬಹುದು. ಉತ್ತಮ ಕಾಳಜಿಯು ವ್ಯಕ್ತಿತ್ವದ ವಿಕಸನಕ್ಕೆ ದಾರಿ ಆಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ರವರು ನುಡಿದರು.
ಇತ್ತೀಚಿಗೆ ಹೊನ್ನಾವರ ತಾಲೂಕು ಪಂಚಾಯತದಲ್ಲಿ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಇಲಾಖೆಗಳ ಕಾರ್ಯವ್ಯಾಪ್ತಿ ಹಾಗೂ ಸಾಧನೆಯ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಪ್ರಸ್ತುತ ಅಧಿಕ ಮಳೆ ಆಗುತ್ತಿರುವುದರಿಂದ ನೆರೆಯ ಸನ್ನಿವೇಶ ಉಂಟಾಗಿದ್ದು ತಾಲೂಕಾಮಟ್ಟದ ಅಧಿಕಾರಿಗಳು ನೊಡಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಜನತೆಗೆ ಸ್ಪಂದಿಸುವಂತೆ ಸೂಚಿಸಿದರು. ಅಧಿಕಾರಿಗಳು ಸರ್ಕಾರದ ಸುತ್ತೋಲೆಯ ಪ್ರಕಾರ ಜನರಿಗೆ ಸೌಲಭ್ಯವನ್ನು ನಿಗದಿತ ಸಮಯಕ್ಕೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ಸಭೆಯಲ್ಲಿ 30ಕ್ಕೂ ಹೆಚ್ಚಿನ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖಾವಾರು ಪ್ರಗತಿಯನ್ನು ಮಂಡಿಸಿದರು. ಈ ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಜಿ.ನಾಯ್ಕ ಹಾಗೂ ತಹಶೀಲ್ದಾರ್ ವಿ.ಆರ್.ಗೌಡ ಉಪಸ್ಥಿತರಿದ್ದರು. ತಾಲೂಕ ಪಂಚಾಯತ ವ್ಯವಸ್ಥಾಪಕರಾದ ಜಿ.ಎಲ್. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment