
ಹಳಿಯಾಳ :- ಜನತೆ ಕೆವಲ ವ್ಯಯಕ್ತಿಕ ಆರೋಗ್ಯದ ಕಡೆಗೆ ಮಾತ್ರ ಗಮನ ಹರಿಸದೆ ಸಾರ್ವತ್ರಿಕ, ಸಾಮಾಜಿಕ, ಆರೋಗ್ಯದ ಕಡೆಗೂ ಗಮನ ಹರಿಸಬೇಕೆಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಕರೆ ನೀಡಿದರು.
ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆ, ತಾಲೂಕಾ ಆರೋಗ್ಯ ಆಸ್ಪತ್ರೆ ಹಳಿಯಾಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳವಟಗಿ ಇವರ ಸಹಯೋಗದಲ್ಲಿ ತಾಲೂಕಿನ ವಟ್ನಾಳ ಗ್ರಾಮದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಸುಮುತ್ತಲಿನ ಪರಿಸರದ ಕಾಳಜಿ ವೈಯಕ್ತಿಕ, ಮಕ್ಕಳ, ಮತ್ತು ಕುಡಿಯುವ ನೀರಿನ ಸ್ವಚ್ಛತೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವಿಕೆ ವಿಧಾನದ ಬಗ್ಗೆ ಮಾಹಿತಿ ನೀಡಿ ಇಲಾಖೆಯ ಯೋಜನೆಗಳ ಕುರಿತು ಮಾನೆ ವಿವರಿಸಿದರು.
ಕಾವಲವಾಡ ಗ್ರಾಮ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ರಾಜಶೇಖರ ಪೂಜಾರ ಮಾತನಾಡಿ ಮಾನವನ ಆರೋಗ್ಯ ಉತ್ತಮ ವಾಗಿರಲು ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು ಮುಖ್ಯ. ಗ್ರಾಮೀಣ ಪ್ರದೇಶದಲ್ಲಿ ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಆರೋಗ್ಯದ ದೃಷ್ಠಿಯಿಂದ ಎಲ್ಲರು ಶೌಚಾಲಯ ಬಳಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೊಜನಾಧಿಕಾರಿ ಸಂತೋಷ ಪರೀಟ, ಕಾವಲವಾಡ ಗ್ರಾ.ಪಂ. ಅಧ್ಯಕ್ಷ ಸೋಮನಿಂಗ ಚೀಪ್ಟಿ, ಉಪಾಧ್ಯಕ್ಷೆ ಜುಲೇಖಾಬಿ ಗಡಾದ, ಕೆ.ವಿ.ರಟ್ಟಿಹಳ್ಳಿಮಠ, ಕಿರಿಯ ಆರೋಗ್ಯ ಸಹಾಯಕರು, ಬೆಳವಟಗಿ ಆಶಾ ಕಾರ್ಯಕರ್ತೆ ಮಂಜೂಳಾ, ಊರಿನ ಹಿರಿಯ ಆದಂಸಾಬ ಧಾರವಾಡ, ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಇದ್ದರು.
Leave a Comment