
ಹಳಿಯಾಳ :- ಕಳೆದ 10ಕ್ಕೂ ಹೆಚ್ಚು ದಿನಗಳ ಬಳಿಕ ಶುಕ್ರವಾರ ದಿವಸ ಹಳಿಯಾಳಿಗರು ಮಳೆಗಾಲವನ್ನು ಅನುಭವಿಸಿದರು. ಬೆಳಿಗ್ಗೆಯಿಂದ ನಿರಂತರವಾಗಿ ಮೊಡ ಕವಿದ ವಾತಾವರಣದೊಂದಿಗೆ ಕೆಲವು ಸಮಯ ಭಾರಿ ಮಳೆ ಸುರಿಯಿತು.
ಹಳಿಯಾಳದಲ್ಲಿ ಮಳೆಯ ತೀವೃ ಕೊರತೆ ಕಂಡು ಬಂದಿದೆ ಅಲ್ಲದೇ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಬೆಸಿಗೆಯ ಕಾಲದಲ್ಲೇ ಇದ್ದೇವೆನೋ ಎನ್ನುವ ವಾತಾವರಣ ಸೃಷ್ಠಿಯಾಗಿತ್ತು. ಇದರಿಂದ ರೈತರು ಚಿಂತೆಗಿಡಾಗಿದ್ದಂತು ಸತ್ಯ. ಆದರೇ ಶುಕ್ರವಾರ ನಸುಕಿನ ಜಾವದಿಂದ ಮಳೆ ಸುರಿದ ಪರಿಣಾಮ ರೈತರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ಶುಕ್ರವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆಗಳವರೆಗೆ ಸುರಿದ ಭಾರಿ ಮಳೆಗೆ ಗಟಾರಗಳು ತುಂಬಿ ರಸ್ತೆಯ ಇಕ್ಕೆಲಗಳಲ್ಲಿ ನೀರು ತುಂಬಿ ಹರಿಯಿತು. ಸಾಯಂಕಾಲದ ಹೊತ್ತಿಗೆ ಮಳೆಯ ಪ್ರಮಾಣದಲ್ಲಿ ತೀರಾ ಇಳಿಕೆ ಕಂಡು ಬಂದಿತು.
Leave a Comment