
ಜೋಯಿಡಾ-
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಜಗಲಬೇಟ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಜೋಯಿಡಾ ತಾ.ಪಂ.ಉಪಾಧ್ಯಕ್ಷ ವಿಜಯ ಪಂಡಿತ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಜೋಯಿಡಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ಹಿಂದುಳಿದ ತಾಲೂಕಿನಲ್ಲಿ ಕಳೆದ 25 ವರ್ಷಗಳಿಂದ ಪತ್ರಕರ್ತರು ಯಾವುದೇ ಸೌಲಭ್ಯವಿಲ್ಲದಂತ ಸಂದರ್ಭದಲ್ಲಿಯೂ ವರದಿಗಾರಿಕೆ ಮಾಡುತ್ತಾ ಬಂದಿದ್ದಾರೆ, ತಾಲೂಕು ಅಂದು ಅಭಿವೃದ್ದಿ ಪಥದತ್ತ ಸಾಗುವುದಕ್ಕೆ ಪತ್ರಕರ್ತರ ಕೊಡುಗೆ ತುಂಬಾ ಇದೆ,ಮುಂದೆಯು ಪತ್ರಕರ್ತರಿಂದ ಸಹಕಾರದ ಅವಶ್ಯಕತೆ ಇದೆ.ಜೊತೆಗೆ ಸಾಧಕರಿಗೆ ಗೌರವ ಸತ್ಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ತಾ,ಪಂ,ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ ಮಾತನಾಡಿ ಇಂದು ಮಾಧ್ಯಮ ಅತಿ ವೇಗವಾಗಿ ಬೆಳೆಯುತ್ತಿದೆ, ಸಂವಿಧಾನದಲ್ಲೂ ಮಾಧ್ಯಮಕ್ಕೆ ಪ್ರಮುಖ ಸ್ಥಾನ ನೀಡಿದಂತೆ ,ಪತ್ರಿಕೆಯವರಿಗೂ ಜವಾಬ್ದಾರಿ ತುಂಬಾ ಇದೆ ಎಂದರು.
ಜೊಯಿಡಾದ ಸಿಪಿಐ ರಮೇಶ ಹೂಗಾರ ಮಾತನಾಡಿ ಇಂದಿನ ತುಂಬಿದ ಸಭೆ , ತುಂಬಿದ ವೇದಿಕೆಯಲ್ಲಿ ಸತ್ಕಾರ ಗೌರವ ಪಡೆಯುತ್ತಿರುವಂತ ಸಂತಸ ಇನ್ನೇಲ್ಲೂ ಸಿಗದು , ಇದನ್ನು ನೋಡಿ ಉಳಿದವರೂ ತಮ್ಮ ಜೀವನದಲ್ಲಿ ಇಂತಹ ಸಂದರ್ಭ ತಂದುಕೊಳ್ಳಿ ಎಂದು ಪತ್ರಕಾ ಮಹತ್ವದ ಕುರಿತು ಮಾತನಾಡಿದರು.
ತಾ,ಪಂ,ವ್ಯವಸ್ಥಾಪಕ ಜಿ,ವಿ,ಭಟ್ಟ ಮಾತನಾಡಿ ಜಗತ್ತಿನ ಕಣ್ತರೆಸುವ ದೊಡ್ಡ ಯಂತ್ರ ಎಂದರೆ ಮಾಧ್ಯಮ , ಇಂದಿನ ದಿನಗಳಲ್ಲಿ ಮಾಧ್ಯಮದಿಂದ ಬಹಳಷ್ಟು ಸಹಾಯವಾಗುತ್ತಿದೆ. ಪತ್ರಿಕೆಯವರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದಾಂಡೇಲಿಯ ಹಿರಿಯ ಪತ್ರಕರ್ತರಾದ ಬಿ,ಎನ್,ವಾಸರೆ, ಹಾಗೂ ಕೃಷ್ಣಾ ಪಾಟೀಲ್ ಮತ್ತು ಕಳೆದ ಸಾಲಿನ ಎಸ್,ಎಸ್,ಎಲ್,ಸಿ,ಯಲ್ಲಿ 125ಕ್ಕೆ 125 ಅಂಕ ಪಡೆದ ಜಗಲಬೇಟ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಿಖಿತಾ ದೇಸಾಯಿ ಇವರಿಗೆ ಗೌರವ ಸತ್ಕಾರ ನೀಡಲಾಯಿತು.
ಸನ್ಮಾನಿತರ ಪರವಾಗಿ ಬಿ,ಎನ್,ವಾಸರೆ ಮಾತನಾಡಿ ಪತ್ರಿಕೆಯಲ್ಲಿ ಕೆಲಸ ಮಾಡುವುದು ಒಳ್ಳೆಯದು, ಆದರೆ ಬದುಕು ಕಷ್ಟಕರ , ವರದಿಗಾರಿಕೆಯಿಂದ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ, ಜೊತೆಗೆ ಪತ್ರಕರ್ತರಿಗೆ ಯಾವ ಭದ್ರತೆಯೂ ಇಲ್ಲ , ಆದರೆ ನಮ್ಮ ವರದಿಗಳನ್ನು ಜನರು ಮೆಚ್ಚುವುದೇ ನಮಗೆ ಖುಷಿ . ಜೋಯಿಡಾ ದಾಂಡೇಲಿಯ ಪತ್ರಕರ್ತರು ಅಣ್ಣ ತಮ್ಮಂದಿರಂತೆ ಇದ್ದೇವೆ, ಒಡೆದು ಬಾಳುವುದಕ್ಕಿಂತ ಕೂಡಿ ಬಾಳುವುದೇ ಉತ್ತಮ ಎನ್ನುವು ನಾನು ಜೋಯಿಡಾ ನೆಲ, ಜಲ, ಜನರನ್ನು ಪ್ರೀತಿಸುವೆ, ನಿಮ್ಮ ಪ್ರೀತಿಯನ್ನು ಸದಾ ಎದೆಯಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಗಲಬೇಟ ಪ್ರೌಢಶಾಲೆಯ ಶಿಕ್ಷಕ ವಿಷ್ಣು ಪಟಗಾರ ಪತ್ರಕರ್ತರೊಂದಿಗೆ ಇರುವ ಸಂಭಂಧ, ಪತ್ರಕೆ ಪತ್ರಿಕೋಧ್ಯಮವಾದ ಬಗ್ಗೆ, ಪತ್ರಕರ್ತರ ಕಷ್ಟ ನಷ್ಟಗಳು , ಪತ್ರಕರ್ತರು ಹೇಗೆ ಸಮಾಜದ ಸೇವಕರು ಎಂಬ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ , ಜಗಲಬೇಟ ಪ್ರೌಢಶಾಲೆಯ ಮುಖ್ಯೋಧ್ಯಾಪಕಿ ಸುಜಾತಾ ನಾಯ್ಕ ಮಾತನಾಡಿದರು,
ಕಾರ್ಯಕ್ರಮದ ಪೂರ್ವದಲ್ಲಿ ಜಗಲಬೇಟ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಸ್ವಾಗತಗೀತೆ ನಡೆಯಿತು, ಶಿಕ್ಷಕ ಗಿರೀಶ ಕೋಟೆಮನೆ ಕಾರ್ಯಕ್ರಮದ ನಿರ್ವಹಣೆ ಮಾಡಿದರು,
ವೇದಿಕೆಯಲ್ಲಿ ಜಗಲಬೇಟ ಗ್ರಾಮ ಪಂಚಾಯತ ಉಪಾಧ್ಯಕ್ಷ ಸುಹಾಸ ದೇಸಾಯಿ, ತಾ,ಪಂ,ಉಪಾಧ್ಯಕ್ಷ ಬಳವಂತ ದೇಸಾಯಿ, ಗ್ರಾ,ಪಂ,ಸದಸ್ಯ ಸಂಜಯ ಭಟ್ಟ, ಜಗಲಬೇಟದ ವಲಯ ಅರಣ್ಯಾಧಿಕಾರಿ ಎಮ್,ಎಸ್, ಕಳ್ಳಿಮಠ ಉಪಸ್ಥಿತರಿದ್ದರು.
Leave a Comment