
ಜೋಯಿಡಾ ತಾಲೂಕಿನ ಜಗಲಬೇಟ ಅರಣ್ಯ ವ್ಯಾಪ್ತಿಯಲ್ಲಿ ಜೋಯಿಡಾ ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತು ಪತ್ರಕರ್ತರಿಂದ ಹೊನ್ನೆಯ ಬೀಜ ಬಿತ್ತನೆ ಮಾಡುವ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಮ್, ಕಳ್ಳಿಮಠ ಮಳೆಗಾಲದ ಸಮಯದಲ್ಲಿ ಬೀಜ ಬಿತ್ತನೆ ಮಾಡುವುದರಿಂದ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಪ್ರಕ್ರಿಯೆ ವೇಗವಾಗಿ ಆಗುತ್ತದೆ, ಅಲ್ಲದೇ ಜೋಯಿಡಾ ತಾಲೂಕಿನಲ್ಲಿ ಇದ್ದಂತ ಕಾಡು ಮತ್ತೆಲ್ಲೂ ಇಲ್ಲ, ಇಂತ ನಿಸರ್ಗ ಸಂಪತ್ತನ್ನು ಬೆಳೆಸುವ ಕೆಲಸ ನಮ್ಮಿಂದ ಆಗಬೇಕು, ಕಾಡಿನ ನಾಶ ಮಾಡುವುದರಿಂದ ಮುಂದೆ ಆಗುವ ಅನಾಹುತಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು , ಆದ್ದರಿಂದಲೇ ಮಳೆಗಾಲದಲ್ಲಿ ಗಿಡ ನೆಡುವ ಮತ್ತು ಬೀಜಗಳನ್ನು ನೆಟ್ಟು ಸಸಿ ಮರಗಳಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ತಾ,ಪಂ,ಕಾರ್ಯನಿರ್ವಣಾಧಿಕಾರಿ ಪ್ರಕಾಶ ಹಾಲಮ್ಮನವರ ಮಾತನಾಡಿ ಇಂದು ಬೀಜಗಳನ್ನು ನೆಟ್ಟು ಸಸಿಯಾಗಿ ಅದೂ ಮುಂದೆ ಮರವಾದಾಗ ನಮ್ಮ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ, ಅಷ್ಟೇ ಅಲ್ಲದೇ ಮರಗಿಡಗಳನ್ನು ಬೆಳೆಸುವುದರಿಂದ ವಾತಾವರಣವೂ ಉತ್ತಮವಾಗಿರುತ್ತದೆ, ಹೆಚ್ಚಿನ ಅರಣ್ಯ ಸಂಪತ್ತು ಇದ್ದಲ್ಲಿ ಮನುಕೂಲ ಆರಾಮವಾಗಿ ಬದುಕಬಹುದು ಎಂದರು,
ಜೋಯಿಡಾದ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ಜೋಯಿಡಾದ ಕಾಡು ಇಂದು ವಿಶ್ವದಲ್ಲೇ ಪ್ರಸಿದ್ದವಾಗಿದೆ, ಎಲ್ಲೂ ಇಲ್ಲದ ಔಷಧಿಯ ಗುಣವುಳ್ಳ ಮರಗಳು ಜೋಯಿಡಾ ತಾಲೂಕಿನ ಕಾಡಿನಲ್ಲಿವೆ, ಹೆಚ್ಚಿನ ವನ್ಯ ಸಂಪತ್ತು ಇದ್ದರೆ ಅಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು,
ಈ ಸಂದರ್ಭದಲ್ಲಿ ಜೋಯಿಡಾದ ಪತ್ರಕರ್ತರಾದ ಸಂದೇಶ ದೇಸಾಯಿ, ಅನಂತ ದೇಸಾಯಿ, ಹಾಗೂ ದಾಂಡೇಲಿ ಪತ್ರಕರ್ತರಾದ ಬಿ,ಎಸ್,ವಾಸರೆ, ಸಂದೇಶ ಜೈನ, ಕೃಷ್ಣಾ ಪಾಟೀಲ್, ಜಗಲಬೇಟದ ಅರಣ್ಯ ರಕ್ಷಕರಾದ ಅಮೀತ ಸಣ್ಣಕ್ಕಿ, ನಾಗರಾಜ ಉಪಸ್ಥಿತರಿದ್ದರು.
Leave a Comment