
ಜೋಯಿಡಾ –
ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯಲ್ಲಿ ವಿಶ್ವ ಹುಲಿ ದಿನಾಚರಣೆಯನ್ನು ಗುಂದ ಅರಣ್ಯ ಇಲಾಕೆ ವತಿಯಿಂದ ನಡೆಸಿಕೊಡಲಾಯಿತು.
ವಿಶ್ವ ಹುಲಿ ದಿನಾಚರಣೆ ಕುರಿತು ಮಾತನಾಡಿದ ಗುಂದ ವಲಯ ಅರಣ್ಯಾಧಿಕಾರಿ ಕೆ,ರಾಥೋಡ್ ಹಿಂದಿನ ಕಾಲದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದವು, ಆದರೆ ಈಗಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ, ಹುಲಿಗೆ ಹಿಂದಿನಿಂದಲೂ ಹೆಚ್ಚಿನ ಸ್ಥಾನ ಮಾನವಿದೆ, ಕೆಲ ಧರ್ಮಗಳಲ್ಲಿ ಹುಲಿಯನ್ನು ಪೂಜಿಸುತ್ತಾರೆ, ಹಣದ ಆಸೆಗಾಗಿ ಹುಲಿಯ ಚರ್ಮ, ಉಗುರು, ಮುಳೆಗಳನ್ನು ಮಾರಾಟ ಮಾಡಲಾಗುತ್ತಿದೆ, ಹುಲಿಯನ್ನು ಬೇಟೆಯಾಡುವುದು ನಿಲ್ಲಬೇಕು ,ಇಲ್ಲವಾದರೆ ಹಸಿರು ತಿನ್ನುವ ಪ್ರಾಣಿಗಳು ಹೆಚ್ಚಿ ಅರಣ್ಯ ನಾಶವಾಗುತ್ತದೆ, ಇದರಿಂದ ಪರಿಸರಕ್ಕೆ ಹಾನಿ ಎಂದರು, ನಮ್ಮ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಸರ್ವೆ ಪ್ರಕಾರ 14 ಹುಲಿಗಳು ಇಲ್ಲಿಯ ಅರಣ್ಯದಲ್ಲಿದೆ ಎಂದರು. ಅಲ್ಲದೇ ಹುಲಿಗಳ ಬಗ್ಗೆ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಿದರು.
ಉಪವಲಯ ಅರಣ್ಯಾಧಿಕಾರಿ ಶರತ ಐಹೊಳೆ ಮಾತನಾಡಿ 1900 ಕಾಲದಲ್ಲಿ ಭಾರತದಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಹುಲಿಗಳು ಇದ್ದವು, ರಾಜಕಾರಣಿಗಳ ಅತೀ ಬುದ್ದಿವಂತಿಕೆಯಿಂದಾಗಿ ಹುಲಿಗಳನ್ನು ಬೇಟೆಯಾಡಿ ಕೊಲ್ಲಲಾಯಿತು, ಆದ್ದರಿಂದಲೇ ಇಂದು ಭಾರತದಲ್ಲ ಹುಲಿಗಳ ಸಂಖ್ಯೆ ಕೇವಲ 4 ಸಾವಿರಕ್ಕೆ ಇಳಿಕೆಯಾಗಿದೆ ಎಂದರು
ಗುಂದ ಪ್ರೌಢಶಾಲೆಯ ಶಿಕ್ಷಕ ಪುರುಷೋತ್ತಮ ಮಾತನಾಡಿ ಹುಲಿ ಎಂಬ ಪ್ರಾಣಿ ಇತ್ತು ಎಂದು ಮುಂದಿನ ಪೀಳಿಗೆಯವರಿಗೆ ತಿಳಿಸಬೇಕಾದರೆ ಹುಲಿ ಬೇಟೆಯಾಡುವುದನ್ನು ನಿಲ್ಲಿಸಬೇಕು, ವಿಶ್ವ ಹುಲಿ ದಿನಾಚರನೆ ಅಂಗವಾಗಿ ನಮ್ಮ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಕ್ಕೆ ನಮ್ಮ ಶಾಲೆಯ ಮಕ್ಕಳಿಗೆ ಇದರ ಅರಿವು ಮೂಡಿಸಿದಂತಾಯಿತು ಎಂದರು.
ವೇದಿಕೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ,ಟ,ಕಟಗೇರಿ, ಶಿಕ್ಷಕ ನವೀನ ಶೇಟ್ ಹಾಗೂ ಅರಣ್ಯ ಇಲಾಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment