
ಜೋಯಿಡಾ –
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಜೋಯಿಡಾಕ್ಕೆ ಬೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಹೆಗಡೆ ನಾನು ಪಕ್ಷದ ಸಲಹೆಯಂತೆ ಬಂದಿದ್ದೇನೆ, ಇಲ್ಲಿ ಶಾಸಕರು ಮತ್ತು ಜನ ಪ್ರತಿನಿಧಿಗಳು ಇದ್ದಾರೆ, ಅವರ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡಲು ಬಂದಿಲ್ಲ, ಜನಪ್ರತಿನಿಧಿಗಳು ಕೈಗೊಂಡ ಕೆಲಸಗಳ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಿಕೊಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳಲು ಬಂದಿದ್ದೇನೆ, ಅದೇ ರೀತಿ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ, ಫಸಲ ಬೀಮಾ, ಕಿಸಾನ ಸಮ್ಮಾನ, ಗ್ಯಾಸ್ ಸೌಲಭ್ಯ, ಆಯುಷ ಮಾನ ಕಾರ್ಡ ಎಲ್ಲವೂ ಜನರಿಗೆ ತಲುಪಲು ವಿಳಂಭವಾಗುತ್ತಿದೆ, ಈ ಮಾಹಿತಿಗಳು ಬಹಳಷ್ಟು ಜನರಿಗೆ ಗೊತ್ತೆ ಇಲ್ಲ, ಹಾಗಾಗಿ ಅಧಿಕಾರಿಗಳು ಜನರಿಗೆ ತಿಳಿಸಿ ಹೇಳಬೆಕು, ಆಯುಷ ಮಾನ ಕಾರ್ಡ ಜೋಯಿಡಾ ಆಸ್ಪತ್ರೆಯಲ್ಲೇ ಸಿಗುವಂತಾಗಬೆಕು, ಜನಪ್ರತಿನಿಧಿಗಳು ಯಾವುದೇ ಅಭಿವೃದ್ದಿ ಕಾಯ್ಕ್ರಮ ಕೈಗೊಂಡರು ನಮ್ಮ ತಕರಾರಿಲ್ಲ, ಪ್ರಧಾನ ಮಂತ್ರಿಗಳ ಮತ್ತು ರಾಜ್ಯದ ಮುಖ್ಯ ಮಂತ್ರಿಗಳ ಪೋಟೋ ಇರಲೇ ಬೇಕು , ಗುತ್ತಿಗೆ ದಾರರು ಮಾಡುವ ಎಲ್ಲಾ ಕೆಲಸಗಳಿಗೂ ಬೋರ್ಡ ಬೇಕು, ಮತ್ತು ಈ ಮಾಹಿತಿಯನ್ನು ಪತ್ರಿಕೆಗಳಿಗೆ ಕೊಡಬೆಕು, ಎಂದರಲ್ಲದೇ ತಾಲುಕಿನ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಜೋಯಿಡಾದ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Leave a Comment