
ಜೋಯಿಡಾ;
ಬಿ.ಜಿ.ವಿಎಸ್. ಕಾಲೇಜ ಜೋಯಿಡಾದಲ್ಲಿ ಇಂದು ಕಾಲೇಜು ವಿದ್ಯಾರ್ಥಿ ಒಕ್ಕೂಟ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಳ್ಗೊಂಡ ಕಾಲೇಜು ಸಮಿತಿ ಸದಸ್ಯ ತುಕಾರಾಮ ಮಾಂಜ್ರೇಕರ್ ಮಂಆತನಾಡುತ್ತಾ, ಬದುಕಿನಲ್ಲಿ ಶಿಕ್ಷಣ ಮಹತ್ವದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಏನು ಕಲಿಯುತ್ತಿರೋ ಅದು ನಿಮ್ಮ ಬದುಕನ್ನು ನಡೆಸುತ್ತಿದೆ. ಹಾಗಾಗಿ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ತಮಗೆ ಶಿಸ್ತು, ಸಂಯಮ ಕಲಿಸುವ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವ ಮೂಲಕ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಾಜದ ಅಭಿವೃವೃದ್ದಿಗೆ ಕೈಜೋಡಿಸಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮಂಜುನಾಥ ಶೆಟ್ಟಿ, ಕಾಲೇಜಿನ ವಾರ್ಷಿಕ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ, ಕ್ರೀಡೆ, ಸಾಂಸ್ಕøತಿಕ ಹಾಗೂ ರಾಷ್ಟ್ರೀಯ ಯೋಜನೆಯ ಎಲ್ಲಾ ಚಟುವಟಿಕೆಯಲ್ಲಿಯೂ ಪಾಲ್ಗೊಂಡು ತಮ್ಮನ್ನು ತಾವು ದೇಶ ಸೇವೆಗೆ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿದ್ದ ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಸ್ಥಳಿಯ ಕಾಲೇಜು ಸಮಿತಿ ಸದಸ್ಯರಾದ ಶ್ಯಾಮ ಪೊಕಳೆ, ಸದಸ್ಯರಾದ ಸಂತೋಷ ಮಂಥೆರೊ, ಚಂರಕಾಂತ ದೇಸಾಯಿ, ರಮೇಶ ನಾಯ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಎಲ್ಲರೂ ಗುರುಹಿರಿಯರ ಮಾರ್ಗದರ್ಶನದಲ್ಲಿ ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರಗತಿ ಸಾಧಿಸಿ ತಾಲೂಕಿಗೆ ಕೀರ್ತಿ ತರಬೇಕೆಂದರು. ಉಪನ್ಯಾಸಕರಾದ ಆರ್.ಜಿ.ಜಾದವ, ಪಿ.ಜಿ. ನಾಯಕ ಇಂದಿನ ಶಿಕ್ಷಣ ಮತ್ತು ಭವಿಷ್ಯದ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಸ್ಥಳಿಯ ಸಮಿತಿ ಅಧ್ಯಕ್ಷ ಮನೋಹರ ದೇಸಾಯಿ ನೆರವೇರಿಸಿದರು. ವೇದಿಕೆಯಲ್ಲಿ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತ ಕೋರಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶಿವಾಜಿ ಜೊಮ್ಮನ್ನವರ ರಾಷ್ಟ್ರೀಯ ಯೋಜನೆಯ ಉದ್ದೇಶಗಳು ಮತ್ತು ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಕುರಿತು ಪ್ರಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ದೈ.ಶಿ.ಉಪನ್ಯಾಸಕ ಪಾಂಡುರಂಗ ಪಟಗಾರ ಅತಿಥಿಗಳಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಮನೀಷಾ ದೇಸಾಯಿ ಮತ್ತು ತಜುಜಾ ದೇವಳಿ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವೇಳಿಪ ವಂದಿಸಿದರು.
Leave a Comment