ಖಾನಪುರ: ಹೌದು ಪೂರ್ವ ಭಾಗದಿಂದ ಪಾರಿಶ್ವಾಡಕ್ಕೆ ಸಂಪರ್ಕಿಸುವ ಪಾರಿಶ್ವಾಡ ಗ್ರಾಮ ಪಕ್ಕದಲ್ಲೇ ಇರುವ ಈ ಬ್ರೀಜ್ ನ ಮೇಲೆ ಸಂಪೂರ್ಣ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬ್ರೀಜ್ ಹಿರೇಮುನವಳ್ಳಿ, ಕಡತನಬಾಗೇವಾಡಿ ಕ್ರಾಸ್ ದಿಂದ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಸಂಪೂರ್ಣ ಗ್ರಾಮದಿಂದ ಖಾನಾಪೂರಕ್ಕೆ ಸಂಪರ್ಕ್ ಕಲ್ಪಿಸುವ ಈ ಪಾರಿಶ್ವಾಡ ಬ್ರೀಜ್ ಇದಾಗಿದೆ. ಈ ಭಾಗದಲ್ಲಿ ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ. ಆದ್ದರಿಂದ ಖಾನಾಪೂರ ಬ್ರಿಜ್ ದಿಂದ ಇದಕ್ಕೆ ಸಂಪರ್ಕವಿರುವುದರಿಂದ ಇಲ್ಲಿಯ ಬ್ರಿಜ್ ಸಂಪೂರ್ಣವಾಗಿ ತುಂಬಿ ಬ್ರಿಜ್ ಮೇಲೆಯೇ ನೀರು ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಜನಸಾಮಾನ್ಯರು ಇದರ ಮೇಲೆ ಯಿಂದ ಸಂಚರಿಸಲು ಖುಷಿಯೊಂದಿಗೆ ಆಂತಕ ಪಡುತ್ತಿದ್ದಾರೆ.
Leave a Comment