
ಹಳಿಯಾಳ :-
ಹಳಿಯಾಳ-ಯಡೋಗಾ ಮಾರ್ಗದಲ್ಲಿರುವ ಯಡೋಗಾ ಸೇತುವೆ ಸಂಪೂರ್ಣ ಜಲಾವೃತವಾಗಿ ರೈತರ ಸಾವಿರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡು ಸೇತುವೆಯಿಂದ ಒಂದು ಕೀಮಿಗೂ ಹೆಚ್ಚು ನೀರು ಏರಿಕೆಯಾಗಿದ್ದರಿಂದ ರೈತರು ತಮ್ಮ ಹೊಲಗಳ ಕೊಟ್ಟಿಗೆಯಲ್ಲಿ ಇರಿಸಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಬೇಕಾದ ತುರ್ತು ಪರಿಸ್ಥಿತಿ ಎದುರಾಯಿತು. ಈ ಸಂದರ್ಭದಲ್ಲಿ ಯಡೋಗಾ ರಸ್ತೆಯಲ್ಲಿ ಮೊನ್ನೆ ತಾನೆ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿದ್ದು ರೈತ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಪ್ರವಾಹದಲ್ಲಿ ಕೆಸರೊಳ್ಳಿ ಸೇತುವೆ ಮುಳುಗಡೆಯಾಗಿ ಸೇತುವೆಯಿಂದ ಸುಮಾರು ಕೀಮಿವರೆಗೆ ನೀರು ಏರಿಕೆಯಾಗಿದ್ದರಿಂದ ರಾಜಶೇಖರ ರೆಸಾರ್ಟ ಮೊದಲ ಮಹಡಿ ಮುಳುಗಡೆಯಾಗಿ ಎರಡನೆ ಮಹಡಿಯೊಳಗೆ ನೀರು ನುಗ್ಗಿತು.


ಗುರುವಾರ ಕೆಸರೊಳ್ಳಿ ಸೇತುವೆ ಸಂಪೂರ್ಣ ಮುಳಗಡೆಯಾಗಿ ನೆರೆ ಪರಿಸ್ಥಿತಿ ಉಂಟಾಗಿ ಹಳಿಯಾಳ-ಯಲ್ಲಾಪುರ, ಹಳಿಯಾಳ-ದಾಂಡೇಲಿ ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿ ಸಂಪರ್ಕ ಕಡಿತಗೊಂಡು, ವಾಹನ ಸಂಚಾರ ಸ್ಥಗಿತಗೊಂಡಿತ್ತು.
Leave a Comment