
ಜೋಯಿಡಾ ;
ತಾಲೂಕಿನ ಬೈಲಪಾರದ ಜನತಾ ಕೊಲೋನಿ, ಬಾಮಣಗಿ ಹಾಗೂ ಮಾವಳಿಂಗೆ ಭಾಗದಲ್ಲಿ ಭಾಗಶಹಃ ಮುಳುಗಡೆ ಹೊಂದಿರುವ ಕುಟುಂಬಗಳ ಸುಮಾರು 70 ಸಂತ್ರಸ್ತ್ರರಿಗಾಗಿ ಹತ್ತಿರದ ದಾಂಡೇಲಿಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದ್ದು, ಮಧ್ಯಾಹ್ನ ಶಾಸಕ ಆರ್.ವಿ.ದೇಶಪಾಂಡೆ ಗಂಜಿಕೇಂದ್ರಕ್ಕೆ ಭೇಟಿನೀಡಿ ನೆರೆ ಸಂತ್ರಸ್ತ್ರರ ಸಮಸ್ಯೆ ಆಲಿಸಿದರು.
ಜೋಯಿಡಾ ತಾಲೂಕಿನ ಬೈಲಪಾರ ಹತ್ತಿರದ ಜನತಾಕಾಲೋನಿ ಹಾಗೂ ಬೈಲಪಾರದ ಕೆಲ ಪ್ರದೇಶಗಳಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆ ಸಂಪರ್ಕಕಡಿತಗೊಂಡಿತ್ತು. ಸದರಿ ಸ್ಥಳಕ್ಕೆ ನೆರೆ ಸಂತ್ರಸ್ಥರ ನೆರವಿಗಾಗಿ ದಾವಿಸಿದ ಜೋಯಿಡಾ ತಾಲೂಕಾ ದಂಡಾಧಿಕಾರಿಗಳ ಸಿಬ್ಬಂದಿಗಳಾದ ಗ್ರಾಮ ಲೆಕ್ಕಾಧಿಕಾರಿ ಶಂಕರ ಮರೆದ, ರೆವೆನ್ಯೂ ಇನ್ಸ್ಪೇಕ್ಟರ್ ಸೇಂಡ್ರಾ ಡಯಾಸ ಹಾಗೂ ಸಿಬ್ಬಂದಿಗಳು ನೆರೆ ಸಂತ್ರಸ್ತ್ರರನ್ನು ಭೇಟಿ ಮಾಡಿ, ಅವರನ್ನು ದಾಂಡೇಲಿ ಸಮೀಪದ ದಾಂಡೇಲಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ತಾಲೂಕಿನ ಮಾವಳಿಂಗೆ ಸುತ್ತಲ ಕೆಲ ಕುಟುಂಬವನ್ನು ಕೂqವೀ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದು, ಒಟ್ಟಾರೆ ಸೂಪಾ ಜಲಾಶಯದ ನೀರು ಹೊರಬಿಟ್ಟಿರುವ ಕಾರಣದಿಂದ ಜೋಯಿಡಾ ತಾಲೂಕಿನ ಸೂಪಾ ಜಲಾಶಯದ ಕೆಳಸ್ಥರದ ಗಡಿಭಾಗದಲ್ಲಿನ ಪ್ರದೇಶಗಳ ಹಾಗೂ ಮಳೆಯ ಪ್ರಭಾವದಿಂದ ಉಂಟಾದ ನೆರೆಯ ಪರಿಣಾಮ ಒಟ್ಟೂ ತಾಲೂಕಿನ 65 ರಿಂದ 70 ಸಂತ್ರಸ್ತ್ರರನ್ನು ದಾಂಡೇಲಿ ಗಂಜಿಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.
ಶಾಸಕರ ಭೇಟಿ : ಮಾಜಿ ಸಚಿವ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸಂತ್ರಸ್ತ್ರ ಸಮಸ್ಯೆ ಆಲಿಸಿದರು. ಊಟೋಪಚಾರದ ವ್ಯಸವ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಸಂತ್ರಸ್ತ್ರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಈಗಿನ ನೆರೆ ಪರಿಸ್ಥಿತಿ ಕಡಿಮೆಗೊಂಡ ನಂತರ ಜನರನ್ನು ವಾಪಸ್ಕಳಿಸಲಾಗುವುದ ಎಂದರು. ಮಳೆಯಿಂದಾದ ಅನಾಹುತಕ್ಕೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದ, ಶಿಘ್ರಪರಿಹಾರ ಕ್ರಮಕೈಗೊಳ್ಳಗುತ್ತಿದೆ. ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದಿರುತ್ತಾರೆ. ಈ ಸಂದರ್ಭದಲ್ಲಿ ಎಮ್.ಎಲ್.ಸಿ. ಎಸ್.ಎಲ್. ಘೋಟ್ನೇಕರ್ ಉಪಸ್ಥಿತರಿದ್ದರು.
Leave a Comment