ಧಾರವಾಡ :- ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮ ಬಳಿಯಲ್ಲಿ 700 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಇಂದ್ರಮ್ಮನ ಕೆರೆಯಲ್ಲಿ ನೀರಿನ ಹೊರ ಹರಿವು ಕಡಿಮೆಯಾಗಿದೆ.
ನಿರಂತರವಾಗಿ ಒಂದು ವಾರಗಳ ಕಾಲ ಸುರಿದ ಭಾರಿ ಮಳೆಗೆ ಇಂದ್ರಮ್ಮನ ಕೆರೆ ಅಪಾಯದ ಮಟ್ಟದಲ್ಲಿ ಹರಿದು ಅಳ್ನಾವರ ಹಾಗೂ ಹಳಿಯಾಳ ಭಾಗದಲ್ಲಿ ಪ್ರವಾಹ ಸೃಷ್ಟೀಯಾಗಿತ್ತು.
ಬಳಿಕ ಈ ಕೆರೆ ಒಡೆಯಲಿದೆ ಎಂದು ಹೇಳಿ ಹೈ ಅಲರ್ಟ್ ಘೋಷಿಸಲಾಗಿತ್ತು ಆದರೇ ದೇವರ ಕೃಪೆಯಿಂದ ಸದ್ಯ ಕೆರೆ ಸೇಫ್ ಇದ್ದು ಕೆರೆ ಒಡೆಯದಂತೆ ಧಾರವಾಡ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Leave a Comment