
ಹೊನ್ನಾವರ : ಎಸ್.ಆರ್.ಎಲ್. ಸಾರಿಗೆ ಸಮೂಹ ಸಂಸ್ಥೆಗಳ ಸ್ಥಾಪಕ ವೆಂಕಟ್ರಮಣ ಹೆಗಡೆ (ಪುಟ್ಟು ಹೆಗಡೆ) ಇವರಿಗೆ ಸಾರಿಗೆ ಕ್ಷೇತ್ರದ ಸಾಧನೆಗಾಗಿ ಈ ಸಾಲಿನ ಕೆಂಗಲ್ ಹನುಮಂತಯ್ಯ ರಾಜ್ಯಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವು ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗಣ್ಯರ ಎದುರು ಸನ್ಮಾನಿಸುವ ಸಂಪ್ರದಾಯವನ್ನು ಬಹುಕಾಲದಿಂದ ನಡೆಸುತ್ತಾ ಬಂದಿದೆ. ದಿನಾಂಕ 18 ರವಿವಾರ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಮುಂಜಾನೆ 10-30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್. ಕುಮಾರ ಉದ್ಘಾಟಿಸುವರು. ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಬಿಜಾಪುರದ ಹಿರಿಯ ಸಮಾಜ ಸೇವಕ ಆಂಜನೇಯ ಸುಬ್ರಾಯಪ್ಪ, ನಾಡೋಜ ಡಾ. ಮಹೇಶ ಜೋಶಿ, ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಶ್ರೀಪಾದ ರೇಣು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಗಾಯಕ ಬಿ.ರಾಜು ಅವರ ಸಂಗೀತ ಸೌರಭವಿದೆ. ಸಾಹಿತಿ ನಾ. ಡಿಸೋಜಾ, ಕ್ಯಾನ್ಸರ್ ತಜ್ಞೆ ಡಾ. ಜಯಂತಿ ತುಮ್ಸಿ ಸಹಿತ ಹಲವರು ವೆಂಕಟ್ರಮಣ ಹೆಗಡೆಯವರೊಂದಿಗೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವೆಂಕಟ್ರಮಣ ಹೆಗಡೆ :
ಉತ್ತರ ಕನ್ನಡ ಜಿಲ್ಲೆಯವರದಾದ ಯಾವುದೇ ಸಾರಿಗೆ ಇಲ್ಲದ ಕಾರಣ ವ್ಯಾಪಾರಸ್ಥರಿಗೆ ಸಮರ್ಪಕ ಸಾಮಗ್ರಿ ಸಾಗಾಣಿಕೆ ಕಷ್ಟವಾಗುತ್ತಿತ್ತು. ಆ ಕಾಲದಲ್ಲಿ ಒಂದು ಟೆಂಪೊದಿಂದ ಸಾರಿಗೆ ಆರಂಭಿಸಿದ ವೆಂಕಟ್ರಮಣ ಹೆಗಡೆ ನಂತರ ಲಾರಿ ಸೇವೆ ಆರಂಭಿಸಿದರು. ಇತ್ತೀಚಿನ ದಶಕದಲ್ಲಿ ರಾಜಧಾನಿಗೆ ಜಿಲ್ಲೆಯ ಎಲ್ಲಾ ಕೇಂದ್ರಗಳಿಂದ ಬಸ್ ಸಾರಿಗೆ ಆರಂಭಿಸಿ, ತೃಪ್ತಿಕರ ಸೇವೆ ನೀಡುತ್ತಿದ್ದಾರೆ. 100ಕ್ಕೂ ಹೆಚ್ಚು ಲಾರಿ, ಬಸ್ ವಾಹನಗಳನ್ನು ಹೊಂದಿದ ಇವರು ಜಿಲ್ಲೆಯ 500ಕ್ಕೂ ಹೆಚ್ಚು ಜನಕ್ಕೆ ಉದ್ಯೋಗಕೊಟ್ಟಿದ್ದಾರೆ. ಶರಾವತಿ ಸಾಂಸ್ಕøತಿಕ ಸಂಘ, ಹವ್ಯಕ ವಿಕಾಸ ವೇದಿಕೆಯಂತಹ ಸಂಘಟನೆಗಳನ್ನು ಆರಂಭಿಸಿದ ಇವರು ಬಿಜೆಪಿಯ ಸಕ್ರೀಯ ಕಾರ್ಯಕರ್ತರು. ಬಿಡುವಿನಲ್ಲಿ ಸಮಾಜಕ್ಕೆ ಉಪಯುಕ್ತ ಸೇವೆ ನೀಡುತ್ತಿದ್ದು ನೆರೆಹಾವಳಿ ಪೀಡಿತರಿಗೆ ಉಚಿತ ಸಾಮಗ್ರಿ ಸಾಗಿಸುತ್ತಿರುವುದು ಇಂದಿನ ಉದಾಹರಣೆ. ಇಂದು ಬೆಂಗಳೂರಿನಿಂದ ಅಂಕೋಲಾ, ಕುಮಟಾ, ಶಿರ್ಸಿ, ಹೊನ್ನಾವರಗಳ ನಿರಾಶ್ರಿತರಿಗೆ ಬೆಂಗಳೂರಿನಿಂದ 100ಕ್ಕೂ ಹೆಚ್ಚು ಬಂಡಲ್‍ಗಳು ಬಂದು ಮುಟ್ಟಿವೆ.
Leave a Comment