
ಹಳಿಯಾಳ:- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ನೆರೆ ಸಂತ್ರಸ್ಥ ಪ್ರದೇಶಗಳ ವೀಕ್ಷಣಾ ಸಮೀತಿಯು ಹಳಿಯಾಳಕ್ಕೆ ಭೇಟಿ ನೀಡಿ ಹಾನಿಗೋಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದರಲ್ಲದೇ ಕೆಸರೊಳ್ಳಿ-ಕೆಕೆ ಹಳ್ಳಿ ಗ್ರಾಮದಲ್ಲಿ ತೆರೆಯಲಾದ ರಕ್ಷಣಾ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಹವಾಲು ಆಲಿಸಿದರು.
ನದಿಯ ಪ್ರವಾಹಕ್ಕೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೊಚ್ಚಿ ಹೋಗಿರುವ ಹಳಿಯಾಳ-ಅಳ್ನಾವರ ಮಾರ್ಗದ ರಾಜ್ಯ ಹೆದ್ದಾರಿ ಹಾಯ್ದು ಹೋಗಿರುವ ದುಸಗಿ ಗ್ರಾಮ ಬಳಿಯ ದುಸಗಿ ಸೇತುವೆ, ಹವಗಿಯಿಂದ ಮಂಗಳವಾಡಕ್ಕೆ ಸಂಪರ್ಕ ಕಲ್ಪಿಸುವ ಮಂಗಳವಾಡ ಸೇತುವೆ, ಹಳಿಯಾಳ-ಯಡೋಗಾ-ಜಾವಳ್ಳಿ ಸಂಪರ್ಕ ಕಲ್ಪಿಸುವ ಯಡೋಗಾ ಸೇತುವೆಗಳಿಗೆ ಭೆಟಿ ನೀಡಿ ಪರಿಶೀಲಿಸಿದರು.

ನದಿಯ ಪ್ರವಾಹದಿಂದ ಸಂಪೂರ್ಣ ಹಾಳಾದ ಕೆಸರೊಳ್ಳಿ ಸೇತುವೆ ಪಕ್ಕದ ನಾಕಾ ಪ್ರದೇಶಕ್ಕೆÀ ತೆರಳಿ ವೀಕ್ಷಿಸಿ ಜನರನ್ನು ಈ ಪ್ರದೇಶದಿಂದ ಸ್ಥಳಾಂತರಿಸಿ ಬೇರೆಡೆ ವಸತಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಪ್ರಸ್ತಾವನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಬಳಿಕ ಕೆಸರೊಳ್ಳಿ ಗ್ರಾಮ ಹಾಗೂ ಕೆಕೆ ಹಳ್ಳಿ ಗ್ರಾಮದಲ್ಲಿ ತೆರೆಯಲಾದ ರಕ್ಷಣಾ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಹವಾಲು ಆಲಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸುವುದಾಗಿ ಹಾಗೂ ಬೆರೆ ಸ್ಥಳದಲ್ಲಿ ಮನೆಗಳನ್ನು ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ವೀಕ್ಷಣಾ ಸಮೀತಿಯ ಹಾವೇರಿ ಸಂಸದರಾಗಿರುವ ಶಿವಕುಮಾರ ಉದಾಸಿ, ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾದ್ಯಕ್ಷ ಕೆಜಿ ನಾಯ್ಕ, ಪ್ರಮುಖರಾದ ಲಿಂಗರಾಜ ಪಾಟೀಲ್, ಮಂಗೇಶ ದೇಶಪಾಂಡೆ ಶಿವಾಜಿ ನರಸಾನಿ, ಅನಿಲ ಮುತ್ನಾಳ, ಪುರಸಭೆ ಸದಸ್ಯರು, ಎಲ್ಲ ಇಲಾಖೆಗಳು ಅಧಿಕಾರಿಗಳು ಇದ್ದರು.

Leave a Comment