
ಹಳಿಯಾಳ:- ನೆರೆ ಪಿಡಿತ ಹಳಿಯಾಳದ ಹಲವು ಗ್ರಾಮಗಳ ಸಂತ್ರಸ್ಥರಿಗೆ ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕದವರು ಶನಿವಾರ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.
ಒಂದು ಕಂಟೆನರ್ ವಾಹನದಲ್ಲಿ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ರಾಜಧಾನಿ ಬೆಂಗಳೂರಿನಿಂದ ಹೊತ್ತು ತಂದ ಜಯ ಕರ್ನಾಟಕ ಸಂಘಟನೆಯ ರಾಜ್ಯ ತಂಡವು ಹಳಿಯಾಳ ತಾಲೂಕಾ ಹಾಗೂ ಜಿಲ್ಲಾ ಘಟಕದ ಸಹಕಾರದೊಂದಿಗೆ ಶನಿವಾರ ನೆರೆ ಸಂತ್ರಸ್ತರ ಬಳಿಗೆ ತೆರಳಿ ತಲುಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ಶ್ರೀನಿವಾಸ, ಭಾಗೀನಾಥ, ಕೆಎಮ್ ನಟರಾಜ, ಸುರೇಶ, ಮಣಿ, ವಸಂತ ಶೆಟ್ಟಿ, ರಾಮದಾಸ, ಉಕ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ವಿಲ್ಸನ್ ಫರ್ನಾಂಡಿಸ್, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಪ್ರಮುಖರಾದ ವಿಕ್ರಾಂತ ಶೆಟ್ಟಿ, ಗೋಪಿ ಮೇತ್ರಿ, ಯಲ್ಲಪ್ಪಾ ಮಾಲವನಕರ, ದತ್ತಾ, ಕಿರಣ, ಜ್ಯೋತಿಬಾ, ನಗರ, ತಾಲೂಕಾ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳು ಇದ್ದರು.
Leave a Comment