
ಹಳಿಯಾಳ:- ಸ್ಮಾರ್ಟ ಫೋನಗಳ ಈ ಕಾಲದಲ್ಲಿಯು ಫೋಟೊಗ್ರಾಫಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ ಅಲ್ಲದೇ ಪತ್ರಿಕಾ ರಂಗಕ್ಕೂ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಪತ್ರಕರ್ತ ಯೋಗರಾಜ.ಎಸ್.ಕೆ. ಹೇಳಿದರು.
ಪಟ್ಟಣದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ 30 ದಿನಗಳ ಕಾಲ ರುಡಸೆಟಿಯಲ್ಲಿ ಜರುಗಿದ ಉಚಿತ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಫೋಟೊಗ್ರಾಫಿಯಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ತಾವು ಮಾಡುವ ವೃತ್ತಿಯಲ್ಲಿ ಶೃದ್ದೆಯನ್ನು ಹೊಂದಿ ಸಮಾಜದಲ್ಲಿ ಗುರುತಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಹೇಳಿ ಸಂಸ್ಥೆಯ ಕಾರ್ಯ ವೈಖರಿಯನ್ನು ಮೆಚ್ಚಿ, ಸಂಸ್ಥೆಯಲ್ಲಿ ಸಿಗುತ್ತಿರುವ ಉಚಿತ ತರಬೇತಿಗಳ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ನಿತ್ಯಾನಂದ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಈವರೆಗೆ 20 ಸಾವಿರಕ್ಕೂ ಅಧಿಕ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತ ರಬೇತಿ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವತಂತ್ರೋತ್ಸವದ ಅಂಗವಾಗಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಶಿಬರಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿಯ ಭಾಗವಾಗಿ ಶಿಬಿರಾರ್ಥಿಗಳಿಂದ ಆಯೋಜಿಸಲಾಗಿದ್ದ ಫೋಟೋಗ್ರಾಫಿ ಪ್ರದರ್ಶನದಲ್ಲಿ ಉತ್ತಮ ಫೋಟೋಗ್ರಾಫರ್ಸಗಳಿಗೂ ಬಹುಮಾನ ನೀಡಲಾಯಿತು. ಶಿಬಿರಾರ್ಥಿಗಳು ನೆನಪಿನ ಕಾಣಿಕೆಯಾಗಿ ಸಂಸ್ಥೆಗೆ ತರಬೇತಿ ಅವಧಿಯ ತಮ್ಮ ಛಾಯಾಗ್ರಹಣದ ಫೋಟೊ ಆಲ್ಬಂ ನೀಡಿದರು.
ಸಂಸ್ಥೆಯ ಉಪನ್ಯಾಸಕ ಮಂಜುನಾಥ ಲಕಮನಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ತರಬೇತಿಯ ಉಪನ್ಯಾಸಕರಾದ ಮನು ವೈದ್ಯ ವಂದಿಸಿದರು. ಅತಿಥಿ ಉಪನ್ಯಾಸಕ ನಾಗರಾಜ ದಶಮನಿ ವೇದಿಕೆಯಲ್ಲಿದ್ದರು.

Leave a Comment