
ಹಳಿಯಾಳ:- ಜೀವನದ ಪ್ರತಿ ನಿತ್ಯದ ದೈನಂದಿನ ದಿನಗಳಲ್ಲಿ ಹೆಜ್ಜೆ ಹಜ್ಜೆಗೂ ಕಾನೂನುಗಳಿವೆ. ಮಹಿಳೆಯರು ತಮಗಾಗಿ ಇರುವ ಕಾನೂನುಗಳ ಬಗ್ಗೆ ಅರಿತುಕೊಂಡು ತಮ್ಮ ಹಕ್ಕು ರಕ್ಷಣೆಗಾಗಿ, ನ್ಯಾಯಕ್ಕಾಗಿ ಕಾನೂನಿನ ನೆರವು ಪಡೆಯಲು ಹಿಂಜರಿಯಬಾರದು ಎಂದು ಹಳಿಯಾಳ ಪೋಲಿಸ್ ಠಾಣೆಯ ಸಿಪಿಐ ಬಿ.ಎಸ್.ಲೋಕಾಪುರ ಕರೆ ನೀಡಿದರು.
ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಡಿ ಹಳಿಯಾಳ ತಾಲೂಕಿನ ಜನಗಾ ಗ್ರಾಮದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯವಾದಿ ಎಮ್.ವಿ.ಅಷ್ಟೇಕರ್ ಮಾತನಾಡಿ, ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸಬೇಕು. ಮಹಿಳೆಯರು ಕಾನೂನಿನ ಅಗತ್ಯ ಮಾಹಿತಿಯನ್ನು ಪಡೆದು ತಮ್ಮ ಮಕ್ಕಳಿಗೆ ಕಾನೂನಿನ ಚೌಕಟ್ಟಿನಲ್ಲಿ ಬದುಕುವ ಮಾರ್ಗದರ್ಶನವನ್ನು ನೀಡಿ ಸಮಾಜದ ಶಕ್ತಿಯನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ ಅಸಂಘಟಿತ ಮಹಿಳೆಯರು ಸ್ವ-ಸಹಾಯ ಸಂಘದ ಮೂಲಕ ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನ ಮಾಡಬೇಕು. ಈ ದಿಸೆಯಲ್ಲಿ ಸಂಸ್ಥೆ ಕಾರ್ಯೋನ್ಮೋಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಗಾ ಗಾ.ಪಂ ಅಧ್ಯಕ್ಷ ಮಹಾದೇವ ಪವಾರ, ಸದಸ್ಯ ಗೊಕುಲ ಗೌq,À ಸ್ವ-ಸಹಾಯ ಸಂಘದ ಸದಸ್ಯರು ಇದ್ದರು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment