
ಜೋಯಿಡಾ –
ಜೋಯಿಡಾ ತಾಲೂಕಿನ ನಾಲ್ಕು ಪಂಚಾಯತ ಗಳು ಸ್ವಚ್ಚಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೆವಾರಿ ಘಟಕದ ಬಗ್ಗೆ ಮಾಹಿತಿ ಪಡೆಯಲು ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತದಲ್ಲಿ ಒಂದು ದಿನದ ವಿಷೇಶ ತರಬೇತಿ ಪಡೆದರು.
ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ್, ಉಳವಿ ಗ್ರಾಮ ಪಂಚಾಯತ್ ,ಜಗಲಬೇಟ ಗ್ರಾಮ ಪಂಚಾಯತ್, ಹಾಗೂ ರಾಮನಗರ ಪಂಚಾಯತಗಳು ಈ ವಿಷೇಶ ತರಬೇತಿಗೆ ಆಯ್ಕೆಯಾಗಿದ್ದವು.
ಈ ತರಬೇತಿಗೆ ಆಯಾ ಪಂಚಾಯತದ ಅಧ್ಯಕ್ಷರು, ಸದಸ್ಯರನ್ನು ಜೋಯಿಡಾ ತಾಲೂಕು ಪಂಚಾಯತ ವತಿಯಿಂದ ಕಳಿಸಿಕೊಡಲಾಗಿತ್ತು.
Leave a Comment