
ಜೋಯಿಡಾ –
ಏಪ್ಯಾದ ಎರಡನೇ ಅತೀ ದೊಡ್ಡ ಜಲಾಶಯ ಎಂಬ ಖ್ಯಾತಿಗೆ ಹೆಸರಾದ ಸುಪಾ ಜಲಶಾಯ ಭರ್ತಿಯಾಗಿ ಇದರಿಂದ ನೀರು ಹೊರಬಿಡಲಾಗುತ್ತಿದೆ, ದಿನವೂ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು,ಕಳೆದ 3 ದಿನಗಳಿಂದ 35 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. 12 ವರ್ಷಗಳಿಗೆ ಒಮ್ಮೆ ಭರ್ತಿಯಾಗುವ ಸುಪಾಜಲಾಶಯ ಈ ಭಾರಿ ಇತಿಹಾಸ ಧಾಖಲು ಮಾಡಿದೆ ಎನ್ನಬಹುದು , ಹಿಂದಿನ ವರ್ಷ ಈ ಜಲಾಶಯ ತುಂಬಿ ಮಾಜಿ ಸಚಿವರು ಆದ ಆರ್,ವಿ,ದೇಶಪಾಂಡೆ ಅವರು 12 ವರ್ಷಗಳ ಬಳಿಕ ತುಂಬಿದ ಸುಪಾ ಜಲಾಶಯಕ್ಕೆ ಬಾಗಿನ ನೀಡಿದ್ದರು, ಆದರೆ ಈ ವರ್ಷ ಮತ್ತೆ ಸುಪಾ ಜಲಾಶಯ ತುಂಬಿ ಇತಿಹಾಸ ದಾಖಲು ಮಾಡಿದೆ.
5 ಸಾವಿರ ಕ್ಯೂಸೆಕ್ ನೀರನ್ನು ಒಮ್ಮೆ ಬಿಡಲಾಗುತ್ತಿದ್ದು, ಡ್ಯಾಂ ನ ಕೆಳ ಭಾಗದ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ಲಿಂಗಣ್ಣ – ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು, ಸುಪಾ ಡ್ಯಾಂ
ಕಳೆದ 3 ದಿನದಿಂದ 35 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದೆ. ಡ್ಯಾಮ್ ನ ಸುರಕ್ಷತೆಗಾಗಿ ನೀರನ್ನು ಬಿಡಬೇಕಾಗುತ್ತದೆ. 5 ಸಾವಿರ ಕ್ಯುಸೆಕ್ನಂತೆ ನೀರು ಬಿಡಲಾಗುತ್ತಿದೆ.
Leave a Comment