
ಹಳಿಯಾಳ :- ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ ವಿಶ್ವ ತ್ರೋಬಾಲ್ ಮಲೇಷಿಯನ್ ಇಂಡಿಪೆಂಡೆಂಟ್ ಚಾಂಪಿಯನ್ ಶಿಪ್ 2019 ಪಂದ್ಯಾವಳಿಯಲ್ಲಿ ಭಾರತ ತಂಡ ಜಯಶಾಲಿಯಾಗಿದ್ದ ವಿಜೇತ ತಂಡದಲ್ಲಿದ್ದ ಹಳಿಯಾಳದ ಕ್ರೀಡಾಪಟು ವೈಷ್ಣವಿ ಗುರುಸಿದ್ದ ತೇಲಿ ಅವರನ್ನು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ತ್ರೋಬಾಲ್ ಕ್ರೀಡಾಪಟು ವೈಷ್ಣವಿ ಅವರನ್ನು ಸನ್ಮಾನಿಸಿ ಮಾತನಾಡಿದ ಸುನೀಲ್ ಹೆಗಡೆ ವಿದ್ಯಾರ್ಥಿನಿ ಪ್ರಸ್ತುತ ಧಾರವಾಡದ ಆರ್.ಎಲ್.ಎಸ್. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹಳಿಯಾಳದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರಿಗೆ ಭವಿಷ್ಯದ ಕ್ರೀಡಾ ಸಾಮಗ್ರಿಗೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಉದಯ ಹೂಲಿ, ಬಿಜೆಪಿ ಪಕ್ಷದ ಪ್ರಮುಖರಾದ ಮಂಜುನಾಥ ಪಂಡಿತ, ವಿಲಾಸ ಯಡವಿ, ತುಕಾರಾಮ ಪಟ್ಟೇಕರ, ವಾಸು ಪೂಜಾರಿ, ರಾಕೇಶ ಬಾಂದೋಡಕರ, ಕಂಚನಾಳಕರ ಮೊದಲಾದವರು ಇದ್ದರು.
Leave a Comment