
ಹಳಿಯಾಳ :- ತ್ಯಾಗ ಬಲಿದಾನದ ಸಂಕೇತವಾಗಿರುವ ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಹಳಿಯಾಳ ತಾಲೂಕಿನಲ್ಲಿ ಹಿಂದು-ಮುಸ್ಲಿಂ ಭಾಂಧವರು ಶ್ರದ್ದಾಭಕ್ತಿಯಿಂದ ಆಚರಿಸುತ್ತಿದ್ದಾರೆ.
ಪಟ್ಟಣದಲ್ಲಿ ಸುಮಾರು 8 ಮಕಾನ ಗಳಿಂದ 30 ಕ್ಕೂ ಹೆಚ್ಚು ಮೊಹರಂ ಪಂಜಾಗಳನ್ನು ಭಕ್ತರು ಹಿಡಿದು ಮೆರವಣಿಗೆ ಮೂಲಕ ಸಾಗುತ್ತಾರೆ. ಪ್ರತಿಯೊಂದು ಮಕಾನದ ಮುಂದೆ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಆ ಭಾಗದ ಪಂಜಾಗಳನ್ನು ಹೊತ್ತವರು ಹಾಗೂ ಅವರ ಜೊತೆ ಭಕ್ತರು ಬೆಂಕಿಯಲ್ಲಿ ನಡೆಯುತ್ತಾರೆ. ಇದರಿಂದಾಗಿ ಅವರ ಇಷ್ಟಾರ್ಥಗಳು ನೇರವೆರುತ್ತವೆ ಎಂದು ಹೇಳಿಕೊಳ್ಳುತ್ತಾರೆ.
ಪಟ್ಟಣದ ಪ್ರಮುಖ ಪಂಜಾಗಳಾದ ದಲಾಯತಗಲ್ಲಿಯ ಬಡೆ ಮಕಾನಿನ ಬೀ ಫಾತಿಮಾ ಹಾಗೂ ಮಕ್ಕಳು, ಖಾಜಿಗಲ್ಲಿಯ ರಾಜಾ ಮಕಾನಿನ ಮೌಲಾಲಿ, ಹಸೇನ, ಹುಸೇನ ಬಜಾರ ರಸ್ತೆಯ ಖಾಸಿಂ ದುಲ್ಹಾ ಜಂಬ್ಯಾಳಗಲ್ಲಿಯ ರಾಜಾ ಮಕಾನಿನ ಇಮಾಮ ಜಾದೆ, ಕಸಬಾಗಲ್ಲಿಯ ಚಾಂದ ಪಂಜಾ (ಲಾಲಚಾ ಹುಸೇನಿ) ಗುತ್ತಿಗೇರಿ ಗಲ್ಲಿಯ ಹಟೇಲ ಬಾದಷಾ ತಕರಾರಲಿ ಮಕಾನಿನ ಹುಸೇನ ಸರ್ವರ್ ಪಂಜಾ, ತಿಮ್ಮಾಪುರ ಗ್ರಾಮದ ಡೋಲಿ ಹಾಗೂ ಮುಂತಾದ ಪಂಜಾಗಳು ಅರ್ಬನ್ ಬ್ಯಾಂಕ್ ಸರ್ಕಲ್ ಮತ್ತು ಜವಳೀಗಲ್ಲಿಯಲ್ಲಿ ಪರಸ್ಪರ ಭೇಟಿಯಾಗುತ್ತವೆ.
ಇದನ್ನು ವಿಕ್ಷಿಸಲು ಬರುವ ಸಾರ್ವಜನಿಕರು ಉತ್ತತ್ತಿ, ಹೂವು, ಪಂಜಾಗಳ ಮೇಲೆ ತೂರುತ್ತಾರೆ. ಪ್ರತಿ ಮಕಾನಿನಲ್ಲಿ ಬೆಂಕಿಯ ಕಿಚ್ಚಿನ ಮೇಲೆ ಪಂಜಾಗಳು ಹಾಗೂ ಭಕ್ತರು ದಾಟುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವುದು ವಿಶೇಷವಾಗಿದೆ.
Leave a Comment