• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸ್ಪೋಟ ತಪ್ಪಿದ ಭಾರಿ ಅನಾಹುತ

September 11, 2019 by Yogaraj SK 1 Comment

ಹಳಿಯಾಳ:- ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್ ಬ್ಯಾಂಕ್)ವೃತ್ತದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿಯ 5ಸಾವಿರ ಲೀ. ನೀರು ಶೇಖರಣಾ ಸಾಮಥ್ರ್ಯ ಹೊಂದಿರುವ ಸಿಂಟೇಕ್ಸ್ ಸ್ಪೋಟಗೊಂಡು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸಿಎಸ್‍ಆರ್(ಸಾಮಾಜಿಕ ಹೊಣೆಗಾರಿಕೆ ನಿಧಿ)ಯ 2.5 ಲಕ್ಷ ರೂ. ಅನುದಾನದಲ್ಲಿ ಮಂಜೂರಿಯಾದ ಈ ಘಟಕವನ್ನು ಲ್ಯಾಂಡ್ ಆರ್ಮಿಯವರು ಒಂದೂವರೆ ವರ್ಷಗಳ ಹಿಂದೆ ನಿರ್ಮಿಸಿದ್ದರು. ಬಳಿಕ ಹಳಿಯಾಳ ಪುರಸಭೆಗೆ ಈ ಶುದ್ದ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಗಿತ್ತು. ಸದ್ಯ ಪುರಸಭೆಯವರು ಇದರ ನಿರ್ವಹಣೆ ಮಾಡುತ್ತಿದ್ದರು.

watermarked 10 hly 3


ಮಂಗಳವಾರ ಮಧ್ಯಾಹ್ನ ಒಮ್ಮೇಲೆ ದೊಡ್ಡ ಶಬ್ದದೊಂದಿಗೆ ಸ್ಪೋಟಗೊಂಡ ಸಿಂಟೆಕ್ಸ್ ಘಟಕದಲ್ಲಿನ ಗಾಜುಗಳನ್ನು ಪುಡಿ ಪುಡಿ ಮಾಡಿದೆ, ಒಳಗಡೆ ಇರುವ ಕೆಲವು ವಸ್ತುಗಳಿಗೂ ಹಾನಿ ಮಾಡಿದೆ. ಸ್ಪೋಟದ ತೀವೃತೆಗೆ ಗಾಜುಗಳು 20 ಅಡಿಗೂ ಹೆಚ್ಚು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಂತಹ ಘಟನೆ ಇದೆ ಮೊದಲು ನೋಡುತ್ತಿರುವುದು ಎಂದು ಸ್ಥಳದಲ್ಲಿದ್ದ ಸಾರ್ವಜನೀಕರು ಹಾಗೂ ಅಧಿಕಾರಿಗಳು ಹೇಳುತ್ತಿದ್ದರು ಅಲ್ಲದೇ ಇದು ಅಪರೂಪದಲ್ಲಿ ಅಪರೂಪದ ಘಟನೆಯಾಗಿದೆ ಎಂದಿರುವ ಅಧಿಕಾರಿಗಳು ಸ್ಪೋಟಕ್ಕೆ ನಿಖರ ಕಾರಣಗಳು ತಿಳಿದು ಬರಬೇಕಿದೆ ಎಂದಿದ್ದಾರೆ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಹಾಗೂ ಸದ್ಯ ಮೋಹರಂ ಹಬ್ಬ ಇರುವುದರಿಂದ ಇದೆ ವೃತ್ತದಲ್ಲಿ ಪಂಜಾ ದೇವರುಗಳನ್ನು ನೋಡಲು ಸಾವಿರಾರು ಜನ ಸೇರುವ ಮುಂಚೆ ಕೆಲವು ನಿಮಿಷಗಳ ಮೊದಲು ಈ ಸ್ಪೋಟ ಉಂಟಾಗಿದ್ದರಿಂದ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಇರುವುದು ದೇವರ ಕೃಪೆಯೇ ಸರಿ.
ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಇಂಜೀನಿಯರ್ ಹರೀಶ ಗೌಡಾ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ರುದ್ರಪ್ಪಾ(ಯಲ್ಲಪ್ಪಾ) ಸಾಂಬ್ರೇಕರ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

watermarked 10 hly 2


ಪುರಸಭೆಯವರು ಇದರ ನಿರ್ವಹಣೆ ಸರಿಯಾಗಿ ಮಾಡದ್ದರಿಂದ ಕೆಲವೆಡೆ ಕಾರ್ಬನ್ ಹಿಡಿದಿದ್ದು ಕಸ ತುಂಬಿಕೊಂಡಿರುವುದರಿಂದ ಸಿಲಿಂಡರ್‍ನಲ್ಲಿ ಒತ್ತಡ ಹೆಚ್ಚಾಗಿ ಈ ಘಟನೆ ನಡೆದಿರಬಹುದು ಎನ್ನುತ್ತಿರುವ ಜನರು ಪುರಸಭೆಯವರ ನಿಷ್ಕಾಳಜಿಯೇ ಇದಕ್ಕೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಜಮಾಯಿಸಿದ್ದ ಜನಪ್ರತಿನಿಧಿಗಳು ಹಾಗೂ ಸಾರ್ವಜನೀಕರು ಆರೋಪಿಸುತ್ತಿರುವುದು ಕಂಡು ಬಂತು.
ಸ್ಥಳಕ್ಕಾಗಮಿಸಿದ ಪುರಸಭೆಯವರು ಕೂಡಲೇ ರಸ್ತೆಯ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗ್ಲಾಸ್ ಚೂರುಗಳನ್ನು ಹಾಗೂ ಇತರ ಬಿಡಿ ಭಾಗಗಳನ್ನು ಸ್ವಚ್ಚಗೊಳಿಸಿದರು.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಆದ್ದರಿಂದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗುವುದು ಹಾಗೂ ಹಾನಿಯಾಗಿರುವ ಘಟಕವನ್ನು ದುರಸ್ಥಿ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯರಾದ ಉದಯ ಹೂಲಿ ಹಾಗೂ ಸಂತೋಷ ಘಟಕಾಂಬಳೆ ಮಾತನಾಡಿ ತಾಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳು ಕೆಲಸವನ್ನೇ ಮಾಡದೆ ತುಕ್ಕು ಹಿಡಿಯುತ್ತಿವೆ. ಕೆಲಸ ಮಾಡುತ್ತಿರುವ ಕೆಲವೆ ಕೆಲವು ಘಟಕಗಳಲ್ಲಿ ಈ ರೀತಿ ಸಮಸ್ಯೆಗಳಾದರೇ ಜನರಿಗೆ ಸಮಸ್ಯೆಯಾಗಲಿರುವ ಕಾರಣ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಉಳಿದ ಘಟಕಗಳಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಬೇಕು ಹಾಗೂ ಸಮಸ್ಯೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು. ಯಾರಿಗೂ ತೊಂದರೆ ಆಗದಂತೆ ಪುರಸಭೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

Haliyal RO ,shudda kudiyuva nirina ghataka , plant

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: Haliyal RO, plant, RO plant blast, shudda kudiyuva nirina ghataka, ಅರ್ಬನ್ ಬ್ಯಾಂಕ್, ಒಮ್ಮೇಲೆ ದೊಡ್ಡ ಶಬ್ದ, ಕಸ ತುಂಬಿ, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣ, ಕೆಲವೆಡೆ ಕಾರ್ಬನ್ ಹಿಡಿದಿದ್ದು, ಗಾಜುಗಳನ್ನು ಪುಡಿ ಪುಡಿ, ಗ್ಲಾಸ್ ಚೂರು, ವೃತ್ತ, ಸಂಗೋಳ್ಳಿ ರಾಯಣ್ಣ, ಸಿಂಟೆಕ್ಸ್ ಘಟಕ, ಸ್ಪೋಟ ತಪ್ಪಿದ ಭಾರಿ ಅನಾಹುತ, ಹಳಿಯಾಳದ ಶುದ್ದ ಕುಡಿಯುವ ನೀರಿನ ಘಟಕ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Comments

  1. Vishnu Nachnekar says

    September 12, 2019 at 10:51 am

    ಸಂಬಂಧಪಟ್ಟವರೇ ಎಲ್ಲಾ ವಿಷಯಗಳಲ್ಲೂ ಮುನ್ನೆಚ್ಚರಿಕೆಯಿರಲಿ.

    Reply

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...