ಹಳಿಯಾಳ :- ಮನೆಯಲ್ಲಿ ತನ್ನ ಗಂಡನೊಂದಿಗೆ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಸೇರಿದಂತೆ ಮನೆಯಲ್ಲಿಯ ಸುಮಾರು 30 ಸಾವಿರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ದೊಚಿಕೊಂಡು ಹೊಗಿರುವ ವಿಚಿತ್ರ ಘಟನೆ ತಾಲೂಕಿನ ಕಾವಲವಾಡ ಗ್ರಾಮದಲ್ಲಿ ನಡೆದಿದೆ.
ದಿ.17 ರಂದು ಮಧ್ಯರಾತ್ರಿ 12 ರಿಂದ 2 ಗಂಟೆಯ ಅವಧಿಯಲ್ಲಿ ಕಳ್ಳರು ಕಾವಲವಾಡದ ನಾಗರತ್ನಾ ಸಂತೋಷ ಉಪ್ಪಾರ ಅವರ ಮನೆಯ ಹಿಂಬಾಗಿಲ ಚಿಲಕವನ್ನು ಒಡೆದು ಒಳನುಗ್ಗಿ ಗೊದ್ರೆಜ್ ಕಪಾಟಿನಲ್ಲಿದ್ದ ಚಿನ್ನದ ಬೊರಮಾಳ, ಕಿವಿಯೋಲೆ ಹಾಗೂ ಮಲಗಿದ್ದ ನಾಗರತ್ನಾಳ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ದೊಚಿಕೊಂಡು ಹೋಗಿರುವ ವಿಲಕ್ಷಣ ಘಟನೆ ವರದಿಯಾಗಿದೆ.
ಈ ಕುರಿತು ನಾಗರತ್ನಾಳ ಮಾವ ನಾರಾಯಣ ಉಪ್ಪಾರ ಅವರು ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪಿಎಸ್ಐ ಆನಂದಮೂರ್ತಿ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದು ತನಿಖೆ ನಡೆಸುತ್ತಿದ್ದಾರೆ.
Leave a Comment