
ಜೋಯಿಡಾ –
ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೆ ಗ್ರಾಮದ ಶಿವಾಜಿ ದೇಸಾಯಿ (48) ಎಂಬುವವರ ಮೇಲೆ ಕರಡಿ ದಾಳಿ ಮಾಡಿದೆ.
ದನಕಾಯಲು ದಿನ ನಿತ್ಯದಂತೆ ರಸ್ತೆಯ ಪಕ್ಕದಲ್ಲಿಯೇ ದನ ಮೇಯಿಸುವ ಸಂದರ್ಭದಲ್ಲಿ ಏಕಾಎಕಿ ಎರಡು ಕರಡಿಗಳು ಶಿವಾಜಿ ಮೇಲೆ ದಾಳಿ ನಡೆಸಿವೆ, ಊರಿನಿಂದ ಹತ್ತಿರವೇ ಇದ್ದ ಕಾರಣ ಇತನ ಚಿರಾಟ ಕೇಳಿ ಊರಿನ ಗ್ರಾಮಸ್ಥರು ಓಡಿ ಬಂದು ಇತನನ್ನು ರಕ್ಷಿಸಿದ್ದಾರೆ, ಕರಡಿ ದಾಳಿಯಿಂದಾಗಿ ತಲೆ,ಕಾಲು,ಸೇರಿದಂತೆ ಮೈ ಮೇಲೆ ಗಾಯಗಳಾಗಿದ್ದು, ಕೂಡಲೇ ಇತನನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ಕರೆದ್ಯೋಯಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ಒಯ್ಯಲಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಕರಡಿ ದಾಳಿಗಳು ಆಗುತ್ತಿದ್ದು ಇಲ್ಲಿಯ ಗ್ರಾಮಸ್ಥರು ಈ ಬಗ್ಗೆ ನಿಗಾ ವಹಿಸಿಬೇಕಿದೆ, ಅಲ್ಲದೇ ಅರಣ್ಯ ಇಲಾಕೆ ಕರಡಿ ದಾಳಿ ಮಾಡಿದ ಶಿವಾಜಿಗೆ ಆತನ ಆರೋಗ್ಯದ ಸೂಕ್ತ ಪರಿಹಾರ ನೀಡಬೇಕಿದೆ.
Leave a Comment