
ಪ್ರಸಕ್ತ ವರ್ಷ ರಾಜ್ಯ ಸೌಹಾರ್ದ ಸಹಕಾರಿ ಸಂಘ ನೀಡುವ ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಅಧ್ಯಕ್ಷರಿಗೆ ನಿರ್ದೆಶಕರು ಹಾಗೂ ಸಿಬ್ಬಂದಿಗಳ ವತಿಯಿಂದ ತಾಲೂಕಿನ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಸ್.ಕಿಮಾನಿಕರ್ ಮಾತನಾಡಿ ಕಳೆದ 8 ವರ್ಷದಿಂದ ಕಟ್ಟಿದ ಸಂಸ್ಥೆ ಇಂದು ರಾಜ್ಯಮಟ್ಟದ ಪ್ರಶಸ್ತಿಯನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಜಿ.ಜಿ.ಶಂಕರ ಅವರ ಅವಿರತ ಶ್ರಮ ಎಂದರೆ ತಪ್ಪಾಗಲಾರದು. ಇಂದು ಹಲವು ಸಂಘಟನೆ ಜೊತೆ ಸೇರಿ ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವುದರಿಂದ ಈ ಪ್ರಶಸ್ತಿ ಅದಕ್ಕೆ ಕಿರೀಟವಿದ್ದಂತೆ. ರಾಜ್ಯದ ವಿವಿಧಡೆ ಶಾಖೆ ಪ್ರಾರಂಭಿಸಿ ಸಂಸ್ತೆ ಇನ್ನಷ್ಟು ಜನಮನ್ನಣಿ ಪಡೆಯಲಿ ಎಂದು ಶುಭ ಕೋರಿದರು.
ನಿರ್ದೆಶಕರು ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಜಿ.ಜಿ.ಶಂಕರ ಮಾತನಾಡಿ ಈ ಸನ್ಮಾನ ನನ್ನೊಬ್ಬನ ಪರಿಶ್ರಮಕ್ಕೆ ಸಂದಿಲ್ಲ. ನನ್ನೊಂದಿಗೆ ಹೆಗಲು ಕೊಟ್ಟ ನಿರ್ದೆಶಕರು ಸಿಬ್ಬಂದಿಗಳು ಹಾಗೂ ಶೇರುದಾರರ ಪರಿಶ್ರಮದ ಫಲ. ಕಳೆದ 8 ವರ್ಷದಿಂದ ನನ್ನ ಸಾಧನೆಗೆ ಸಮಾಜ ಹಾಗೂ ಮಾಧ್ಯಮ ಸಹಕಾರ ನೀಡಿದೆ. ನಮ್ಮ ಸಂಸ್ತೆ ಇನ್ನು ಅಂಬೆಗಾಲಿಡುತ್ತಿದ್ದು ಇನ್ನಷ್ಟು ಸಾಧನೆ ಮಾಡಲು ಇದು ಪ್ರೇರಣೆ ನೀಡಿದಂತೆ. ಈ ಸಮಾಜ ಹಾಗೂ ನನ್ನ ಸಂಸ್ಥೆಯ ಪ್ರತಿಯೋರ್ವರ ಪರೀಶ್ರಮಕ್ಕೆ ನಾನು ಗೌರವ ಕೋಡುತ್ತೇನೆ. ಮುಂದಿನ ದಿನದಲ್ಲಿಯೂ ಸಮಾಜಮುಖಿ ಕಾರ್ಯಕ್ಕೆ ನಾನು ಸದಾ ಸಿದ್ದ. ಸಂಸ್ಥೆ ಇನ್ನಷ್ಟು ಬೆಳೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ನಿರ್ದೆಶಕರು ಹಾಗೂ ಸಿಬ್ಬಂದಿಗಳು ಸಂಸ್ತೆಯಲ್ಲಿ ಕಾರ್ಯನಿರ್ವಹಿಸಲು ಹೆಮ್ಮೆಯಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಜನರಲ್ ಮ್ಯಾನೇಜರ್ ಮಹೇಶ ಶೆಟ್ಟ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಮ್ಯಾನೇಜರ್ ಕೇಶವ ತಾಂಡೇಲ್ ವಂದಿಸಿದರು.
Leave a Comment