
ಜೋಯಿಡಾ ತಾಲೂಕಿನ ಕುಂಬಾರವಾಡಾ ತಂಡವೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜೋಯಿಡಾ ತಾಲೂಕಿಗೆ ಹೆಮ್ಮೆ ತಂದಿದೆ.
ಕುಮಟಾದಲ್ಲಿನಡೆದ ಅಂಡರ್ 19( ನೈಟಿನ್) ಬನವಾಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಲ್ಲಿನ ಕುಂಬಾರವಾಡಾ ತಂಡ ಕಬ್ಬಡ್ಡಿ ಪೈನಲನಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು 20 ತಂಡಗಳು ಭಾಗವಹಹಿಸಿದ್ದವು ಎನ್ನಲಾಗಿದೆ.
ರಾಜ್ಯಮಟ್ಟಕ್ಕೆ ಆಯ್ಕೆಯಾಗದ ಸ್ವಪೀಲ್ ಕುಂಬಗಾಳಕರ ,ಸತೀಶ ಮಿರಾಶಿ, ರಾಜೇಂದ್ರ ಸಾವಂತ,ಮಂಜುನಾಥ,ಸುರಜ ಮಿರಾಶಿ, ರೋಹಿತ್ ಭಟ್ಕಳ, ಅಣ್ಣಪ್ಪ ಭಟ್ಕಳ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಂಬಾರವಾಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಪುರುಷೋತ್ತಮ ಕಾಮತ ಈ ಮಕ್ಕಳಿಗೆ ಕ್ರೀಡಾಕೂಟಕ್ಕೆ ಭಾಗವಹಿಸಲು ಧನ ಸಹಾಯ ಮಾಡಿದ್ದಾರೆ, ಅಲ್ಲದೇ ರಾಜ್ಯ ಮಟ್ಟಕ್ಕೂ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ, ಊರಿನ ವಿಘ್ನೇಶ ಕಾಮತ, ರೋಷನ್ ಕಾಮತ,ಮಕ್ಕಳಿಗೆ ತರಬೇತಿ ಕ್ರೀಡಾಕೂಟಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಕುಂಬಾರವಾಡಾ ಪಂಚಾಯತ ಈ ಮಕ್ಕಳನ್ನು ಅಭಿನಂದಿಸಿದೆ.
Leave a Comment