

ಜೋಯಿಡಾ ತಾಲೂಕಿನ ಬಿಜೆಪಿಯ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ನಡೆದಿದ್ದು ಈ ಬಾರಿ ಯುವ ಕಾರ್ಯಕರ್ತರ ಪಾಲಾಗಲಿದೆಯೇ ಅಥವಾ ಹಿರಿಯ ಕಾರ್ಯಕರ್ತರಿಗೆ ಅದ್ಯಕ್ಷ ಪಟ್ಟ ಸಿಗಲಿದೆಯೇ ಎಂಬುದು ಕುತುಹಲ ಮೂಡಿಸಿದೆ.
ಬಿಜೆಪಿಯ ಯುವ ಕಾರ್ಯತರ್ಕರ ಪಟ್ಟಿಯಲ್ಲಿ ಮೊದಲಿಗೆ ಆಕಾಶ ಅನಸ್ಕರ ಹೆಸರಿದ್ದು ಇವರಿಗೆ ತಾಲೂಕಾ ಅಧ್ಯಕ್ಷ ಸ್ಥಾನ ಸಿಗುವ ಅವಕಾಶವಿದೆ ಎಂಬ ಮಾತು ಕೇಳಿ ಬರುತ್ತಿದೆ, ಆಕಾಶ ಅನಂತ ಕುಮಾರ ಹೆಗಡೆ ಹಾಗೂ ಸುನೀಲ್ ಹೆಗಡೆಯವರ ಶಿಷ್ಯನಾಗಿದ್ದು, ಕುಂಬಾರವಾಡಾದಲ್ಲಿ ಕಳೆದ 2 ಚುನಾವಣೆಯಲ್ಲಿ ಬಿಜೆಪಿ ಲೀಡ್ಗೆ ಈತನೇ ಕಾರಣ ಎಂಬುದು ಬಿಜೆಪಿಗರಿಗೆ ತಿಳಿದಿದೆ, ಅಲ್ಲದೇ ಯುವ ಕಾರ್ಯಕರ್ತನಾಗಿದ್ದು, ಯುವ ಜನತೆ ಇಂಥವರನ್ನು ಆರಿಸುವ ಭರವಸೆ ತೋರಿದೆ.

ರಾಮನಗರ ಭಾಗದಿಂದ ಶಿವಾಜಿ ಗೋಸಾವಿ ಅಧ್ಯಕ್ಷ ಪಟ್ಟಕ್ಕೆ ಆಕಾಂಕ್ಷಿಯಾಗಿದ್ದು ರಾಮನಗರ ಭಾಗದಲ್ಲಿ ಹೆಚ್ಚಿನ ಜನ ಬೆಂಬಲ ಇವರಿಗಿದೆ,ಹಾಗೆಯೇ ಹಿರಿಯ ನಾಯಕ ಶರತ ಗುರ್ಜರರವರಿಗೂ ಪಟ್ಟ ಸಿಗುವ ಸಂಭವ ಇದೆ, ಅಷ್ಟೇ ಅಲ್ಲದೇ ಅಖೇತಿಯಲ್ಲಿ ಬಹಳ ವರ್ಷಗಳಿಂದ ಬಿಜೆಪಿಯಲ್ಲಿಯೇ ಕೆಲಸ ಮಾಡಿ ಹೆಸರು ಮಾಡಿದ ದೀಪಕ ದೇಸಾಯಿ ಕೂಡಾ ಆಕಾಂಕ್ಷಿಯಾಗಿದ್ದು , ಇವರಿಗೆ ಹಿರಿಯ ನಾಯಕರ ಬೆಂಬಲವಿದೆ , ಕ್ಯಾಸಲ್ ರಾಕ್ ಭಾಗದ ಸಂತೋಷ ರೆಡ್ಕರ ,ಹಾಗೂ ನಾಗೋಡಾದ ಪ್ರದೀಪ ದೇಸಾಯಿ, ಕುಣಬಿಗಳ ಕಡೆಯಿಂದ ಅಜಿತ ಮಿರಾಶಿಗೂ ಸಿಗುವ ಸಂಭವವಿದೆ,
ಈಗಿರುವ ತಾಲೂಕಾ ಅಧ್ಯಕ್ಷ ತುಕಾರಾಮ ಮಾಜ್ರೇಕರ ರವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಂಭವ ಕಡಿಮೆ ಇದ್ದು , ಈ ಬಾರಿ ಯುವ ನಾಯಕರ ಪಾಲಾಗಲಿದೆ ಎಂಬುದು ಬಿಜೆಪಿಗರ ಮಾತು.


Leave a Comment