
ಜೋಯಿಡಾ –
ತಾಲೂಕಿನ ಕೇಂದ್ರ ಸ್ಥಳದಲ್ಲಿರುವ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಬೇಕಾದ ಸ್ಕಾನಿಂಗ್ ಮಶೀನ್ ಕೂಡಲೇ ಒದಗಿಸಿಕೊಡಬೇಕೆಂದು ಶಾಸಕರಿಗೆ ಮತ್ತು ವಿಧಾನ ಪರಿಷತ ಸದಸ್ಯರಿಗೆ ಜೋಯಿಡಾ ಗ್ರಾ.ಪಂ.ಮನವಿ ಮಾಡಿಕೊಂಡಿದೆ.
ಜೋಯಿಡಾ ತಾಲೂಕು ತುಂಬಾ ವಿಸ್ತಿರ್ಣ ಹೊಂದಿದ್ದು , ಸಾಕಷ್ಟು ಬಡ ಜನರೇ ಇದ್ದಾರೆ, ಯಾರಿಗೆ ಆಗಲಿ ವೈದ್ಯಕೀಯ ಬೇಕೆಂದರೆ ದೂರದ ಕಾರವಾರ, ಹುಬ್ಬಳ್ಳಿ, ಬೆಳಗಾವಿ, ಗೋವಾಕ್ಕೆ ಹೋಗುವ ಅನಿವಾರ್ಯತೆ ಇದೆ. ತಾಲೂಕಿನಲ್ಲಿ ಸದ್ಯ 100 ಹಾಸಿಗೆಯ ಆಸ್ಪತ್ರೆ ಇದೆ, ಆದರೆ ರೋಗಿಗಳ ತಪಾಸಣೆಗೆ ಬೇಕಾದ ಸ್ಕಾನಿಂಗ್ ಮಶೀನ್ ಇಲ್ಲವಾಗಿದೆ, ಆದ್ದರಿಂದ ಸಾರ್ವಜನಿಕರ ಅನುಕೂಲತೆಗಾಗಿ ಸ್ಕಾನಿಂಗ ಮಶೀನ್ ಮತ್ತು ಸೂಕ್ತ ವೈದ್ಯರನ್ನು ನೇಮಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮನವಿ ಪತ್ರವನ್ನು ಶಾಸಕರಾದ ಆರ,ವಿ,ದೇಶಪಾಂಡೆ, ಮತ್ತು ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ ಅವರಿಗೆ ಕಳುಹಿಸಲಾಗಿದೆ,
ಈ ಮನವಿ ಪತ್ರಕ್ಕೆ ಜೋಯಿಡಾ ಗ್ರಾಮ ಪಂಚಾಯತ ಉಪಾಧ್ಯಕ್ಷ ಶ್ಯಾಮ ಪೊಕಳೆ,ಸದಸ್ಯರಾದ ಸಂತೋಷ ಮಂಥೆರೋ,ರಾಜಶ್ರೀ ಹರಿಜನ, ಅಂಗಿತಾ ಗಾವಾಡಾ ಮತ್ತು ನೀಲಾ ನಾಯ್ಕ ಸಹಿ ಮಾಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment