
ಜೋಯಿಡಾ –
ಸತತ ಎರಡು ವರ್ಷಗಳಿಂದ ತಾಲೂಕಾ ಮಟ್ಟದಲ್ಲಿ ಬಾಪೇಲಿ ಕ್ರಾಸ್ ಶಾಲೆ ಸಮಗ್ರ ವೀರಾಗ್ರಣಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಬಾಪೇಲಿ ಕ್ರಾಸ್ ಪ್ರೌಢಶಾಲೆಯ ಎಸ್,ಡಿ,ಎಮ್,ಸಿ, ಅಧ್ಯಕ್ಷ ಸದಾನಂದ ದಬ್ಗಾರ ಹೇಳಿದರು.
ಗುರು ಇಲ್ಲದೇ ಯಾವ ಕೆಲಸವೂ ಪರಿಪೂರ್ಣವಲ್ಲ ,ಸತತವಾಗಿ ಎರಡನೇ ಬಾರಿ ವೀರಾಗೃಣಿ ತೆಗೆದುಕೊಳ್ಳುಲು ಕಾರಣ ಇಲ್ಲಿನ ದೈಹಿಕ ಶಿಕ್ಷಕ ಗೊವಿಂದ ಅಂಬಿಗ ಎಂದರು. ಮಕ್ಕಳ ಈ ಸಾಧನೆ ನಮಗೆ ಹೆಮ್ಮೆ ತಂದಿದೆ, ವಿಭಾಗ ಮಟ್ಟದಲ್ಲೂ ನಮ್ಮ ಶಾಲೆಯ ಮಕ್ಕಳು ಮಿಂಚಲಿ ಎಂದು ಅಭಿನಂದಿಸಿದರು.
ಸಪ್ಟೆಂಬರ 19 ರಂದು ಕಾಸಲರಾಕ್ನಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಜಾನ್ಸನ್ ಬಾರಗೇರಾ 100 ಪ್ರಥಮ.200 ಪ್ರಥಮ,ಉದ್ದ ಜಿಗಿತ ಪ್ರಥಮ, ನಾರಾಯಣ ಗಾವಾಡಾ 800 ಮೀ ಪ್ರಥಮ 1500 ಮೀ ಪ್ರಥಮ,3000 ಮೀ ಪ್ರಥಮ, ಪರಶುರಾಮ ಹರಿಜನ ಹರ್ಡಲ್ಸ ಪ್ರಥಮ,ತ್ರಿವಿದ ಜಿಗಿತ ಪ್ರಥಮ, ರಾಜೇಶ ಹರಿಜನ 400 ಮೀ ಪ್ರಥಮ,200 ಮೀ ತೃತೀಯ,ಪರಶುರಾಮ ವಾಲ್ಮೀಕಿ ಹ್ಯಾಮರ ಥ್ರೋ ದ್ವೀತಿಯ,ಚಂದನ ಪಟಗಾರ ಗುಂಡು ಎಸೆತ ದ್ವೀತಿಯ,
ಬಾಲಕಿಯರ ವಿಭಾಗದಲ್ಲಿ ಸ್ನೇಹಾ ಸೋಲೆಕರ ಜಾವೆಲಿನ ಥ್ರೋ ಪ್ರಥಮ, ಹ್ಯಾಮರ ಥ್ರೋ ದ್ವೀತೀಯ, ಸುಶ್ಮೀತಾ ದೇಸಾಯಿ ನಡಿಗೆ ತ್ರತೀಯ, ಮೀಥಾಲಿ ಗಾವಾಡಾ ಹ್ಯಾಮರ್ ತ್ರತೀಯ, ಗುಂಪು ಆಟದಲ್ಲಿ ರಿಲೆ ಪ್ರಥಮ, ಥ್ರೋ ಬಾಲ್ ಪ್ರಥಮ ಚದುರಂಗದಲ್ಲಿ ದ್ರುವ ಭಟ್ಟ ಪ್ರಥಮ, ನಿಲೇಶ ಮಿರಾಶಿ ದ್ವೀತೀಯ ಸ್ಥಾನ ಗಳಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ.
ಈ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಶಿವಾನಂದ ಪಾಟೀಲ್, ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಶೇಟ್,ದೈಹಿಕ ಶಿಕ್ಷಕ ಗೋವಿಂದ ಅಂಬಿಗ ಮುಂತಾದವರು ಉಪಸ್ಥಿತರಿದ್ದರು.


Leave a Comment