
ಜೋಯಿಡಾ –
ಕಾರ್ಯಕ್ರಮ ಯಶಸ್ವಿಯಾಗಲು ಪರಿಶ್ರಮ ಅಗತ್ಯ, ಪರಿಶ್ರಮದಿಂದಲೇ ಇಂದು ಸಪ್ತಸ್ವರ ಸೇವಾ ಸಂಸ್ಥೆ ಇಷ್ಟು ಮೇಲೆ ಬಂದಿದೆ ಎಂದು ಮಾತೃ ಮಂಡಳಿ ಅದ್ಯಕ್ಷೆ ರಾಧಾ ಹೆಗಡೆ ಹೇಳಿದರು.
ಅವರು ಕನ್ನಡ ಸಂಸ್ಕ್ರತಿ ಇಲಾಖೆ , ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಅಭಿವೃದ್ದಿ ಟ್ರಸ್ಟ ದಾಂಡೇಲಿ, ಕೀರ್ತಿ ತಾಳ ಮದ್ದಳೆ ಕೂಟ ಇವರು ನಡೆಸಿಕೊಟ್ಟ ಯಕ್ಷಗಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮೂರಿನ ಹೆಣ್ಣು ಮಕ್ಕಳಿಗೆ ಸಪ್ತಸ್ವರ ಸಂಸ್ಥೆ ಅವಕಾಶ ನೀಡಿದೆ, ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಣ್ಣು ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಟ್ಟಿದೆ, ನಮ್ಮೂರಿನ ಹೆಣ್ಣು ಮಕ್ಕಳು ಯಕ್ಷಗಾನ ಕಲಿಯಲು ಈ ಸಂಸ್ಥೆಯೇ ಮುಖ್ಯ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೀಮಾ ಅಧ್ಯಕ್ಷ ವಿಭಾಕರ ದೇಸಾಯಿ ಮಾತನಾಡಿ, ಕಲೆ ಎಂಬುದು ಎಲ್ಲರಲ್ಲಿಯೂ ಇರುತ್ತದೆ, ಆದರೆ ಅದನ್ನು ಬಡಿದೆಬ್ಬಿಸಬೇಕು ,ಇಲ್ಲವಾದರೆ ಅದು ನಮ್ಮಲ್ಲಿಯೇ ಇದ್ದು ಬಿಡುತ್ತದೆ, ನಮ್ಮ ಕಲೆಯನ್ನು ಪ್ರದರ್ಶನಗೊಳಿಸಲು ಇಂಥ ಸಂಸ್ಥೆಗಳು ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳಬೇಕು ಎಂದರು.
ವೇದಿಕೆಯಲ್ಲಿ ಹಿರಿಯ ಪರ್ತಕರ್ತ ಅನಂತ ದೇಸಾಯಿ, ತಾಳಮದ್ದಳೆ ಕಲಾವಿದೆ ಗೀತಾ ದಾನಗೇರಿ, ನಂದಿಗದ್ದಾ ಪ್ರೌಢಶಾಲೆಯ ಅಧ್ಯಕ್ಷ ಸದಾನಂದ ಉಪಾಧ್ಯ, ನರಸಿಂಹ ಗಾಂವ್ಕರ ಉಪಸ್ಥಿತರಿದ್ದರು.
ನಂತರದಲ್ಲಿ ಅಜಿತ ಹೆಗಡೆ ಇವರಿಂದ ಸಂಗೀತ ಕಾರ್ಯಕ್ರಮವೂ ನಡೆಯಿತು.


Leave a Comment