
ಜೋಯಿಡಾ ಸೇವಾ ಸಹಕಾರಿ ಸಂಘವೂ ಈ ಬಾರಿ 10 ಲಕ್ಷ ಲಾಭಗಳಿಸಿದೆ, ಸಂಘದ ಲಾಭಕ್ಕೆ ಕಾರಣ ಈ ಸಂಘದ ಸದಸ್ಯರೇ ಎಂದು ಜೋಯಿಡಾ ಸಹಕಾರಿ ಸಂಘದ ನಿರ್ದೆಶಕ ಸದಾನಂದ ದಬ್ಗಾರ ಹೇಳಿದರು.
ಅವರು ಜೋಯಿಡಾ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಈ ವರ್ಷ ರೈತರಿಗೆ ಸಾಲ ಮನ್ನಾದಂತ ಯೋಜನೆಯಿಂದ ತುಂಬಾ ಲಾಭವಾಗಿದೆ, ಶೇ 5 ರಷ್ಟು ಡಿವಿಡೆಂಡ್ ರೈತರಿಗೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ಸಹಕಾರಿ ಸಂಘವೂ ಇನ್ನೂ ಹೆಚ್ಚಿನ ಲಾಭ ಗಳಿಸಲಿದೆ, ರೈತರು ನಮ್ಮ ಸಂಘದಲ್ಲಿ ವ್ಯವಹಾರ ಮಾಡುವ ಮೂಲಕ ಸಾಲ ಮನ್ನಾದಂತ ಯೋಜನೆಯ ಮತ್ತು ಸಂಘದ ಇನ್ನೀತರ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಬದಲ್ಲಿ ಸಂಘದ ವ್ಯವಹಾರ ಮತ್ತು ಸಂಘದಲ್ಲಿ ಆದಂತಹ ಲಾಭ ನಷ್ಟಗಳ ಬಗ್ಗೆ ಸಾರ್ವಜನಿಕರ ಮದ್ಯೆಯೇ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗಾವಡಾ, ಉಪಾಧ್ಯಕ್ಷರಾದ ಶಾಂತಾ ವೆಳಿಪ್,ನಿರ್ದೇಶಕರಾದ ಅಜಿತ ತೆಂಗ್ಸೆ, ದಾಮು ಮಂಥೇರೋ ಉಪಸ್ಥಿತರಿದ್ದರು.

Leave a Comment