
ಜೋಯಿಡಾ
ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಸುಪಾ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ ಈ ವರ್ಷ 4 ಲಕ್ಷ ಲಾಭವಾಗಿದ್ದು ಉತ್ತಮ ರೀತಿಯಲ್ಲಿ ಸಂಘ ಮುಂದುವರಿಯುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಪ್ರಕಾಶ ಬಬ್ಲೇಶ ಹೇಳಿದರು.
ಇತ್ತಿಚಿಗೆ ನಡೆದ ಸಹಕಾರಿ ಸಂಘದ 50 ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಏಳಿಗೆಗೆ ಕಾರಣರಾದ ಗುರುನಾಥ ಕಾಮತ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು ,ಅಲ್ಲದೇ ಸಂಘದ ಹೊಸ ಕಟ್ಟಡ 30 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಸಂಘದ ಶೇರುದಾರರಿಗೆ ಶೇ 5 ರಷ್ಟು ಲಾಭಾಂಶ ನೀಡಲಾಗಿದೆ ಎಂದರು, ನಂತರ ಸಂಘದ ಮುಖ್ಯ ಕಾರ್ಯನಿರ್ವಾಹಕ ಸಾಗರ ಬಾನಾವಳಿಯವರು ಸಂಘದ ವಾರ್ಷಿಕ ಸಾಧನೆ ಬಗ್ಗೆ ತಿಳಿಸಿದರು, ನಂತರ ಎಸ್,ಎಸ್,ಎಲ್,ಸಿ,ಮತ್ತು ಪಿ,ಯು,ಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.
ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ರಾಜೆಂದ್ರ ಗಾವಡೆ, ವಿನೋದ ಕೊರೆ ಸುಧೀರ ಕಾಮತ,ಶೋಭಾ ಮುತಗೇಕರ,ಪಂಡರಿನಾತ, ಮುಂತಾದವರು ಉಪಸ್ಥಿತರಿದ್ದರು.
Leave a Comment