
ಜೋಯಿಡಾ ತಾಲೂಕು ಮುಂದಿನ ದಿನಗಳಲ್ಲಿ ಶ್ರೀಮಂತ ತಾಲೂಕಾಗಲಿದೆ,ಅದಕ್ಕೆ ಕಾರಣ ಇಲ್ಲಿರುವ ಕಾಡು, ಕರ್ನಾಟಕದಲ್ಲಿ ಅತೀ ಹೆಚ್ಚು ಕಾಡನ್ನು ಹೊಂದಿದ ತಾಲೂಕು ಇದಾಗಿದ್ದು, ಇಂತಹ ಸ್ಥಳದಲ್ಲಿ ಹೆಣ್ಣು ಮಕ್ಕಳೇ ಸೇರಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಘತಿ ಎಂದರು.
ಅವರು ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಟ್ರಸ್ಟ ದಾಂಡೇಲಿ ಇವರ ಸಹಯೋಗದಲ್ಲಿ ನಡೆದ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ 14 ವರ್ಷಗಳಿಂದ ಸಪ್ತಸ್ವರ ಸಂಸ್ಥೆ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ, ಜನರ ಸಹಕಾರ ಇವರಿಗೆದೆ ಆದ್ದರಿಂದ ಇವರ ಕಾರ್ಯಕ್ರಮಗಳು ಯಶಸ್ಸು ಕಾಣುತ್ತಿದೆ, ಉತ್ತರಕನ್ನಡ ಮತ್ತು ದಕ್ಷಿಣಕನ್ನಡಗಳಲ್ಲಿ ಖ್ಯಾತಿ ಪಡೆದ ಯಕ್ಷಗಾನ ಕಲೆ ಇಂದು ಕರ್ನಾಟಕದಲ್ಲಿಯೇ ಜನಪ್ರೀಯವಾಗುತ್ತಿದೆ, ಈಗ ಹೆಚ್ಚಿನ ಜನರು ಯಕ್ಷಗಾನವನ್ನು ಇಷ್ಟಪಡುತ್ತಿದ್ದಾರೆ, ಜೋಯಿಡಾದಂತ ಪ್ರದೇಶದಲ್ಲಿ ಸಂಘಟನೆ ಮಾಡುವುದು ಕಷ್ಟ, ಆದರೂ ಇಲ್ಲಿನ ಮಹಿಳಾ ಸಂಘದವರು ಉತ್ತಮ ಕೆಲಸ ಮಾಡುತ್ತಿದ್ದಾರೆ, ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಅವರು ಜಿಲ್ಲೆ ಮತ್ತು ರಾಜ್ಯದಲ್ಲಿ ನೀಡಲಿ ಎಂದು ಹಾರೈಸಿದರು.

ಯರಮುಖದ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ತಮ್ಮಿಂದ ಆದ ಸಹಾಯ ಮತ್ತು ಸರ್ಕಾರದಿಂದ 10 ಲಕ್ಷ ನೀಡುವ ಭರವಸೆ ನೀಡಿದ್ದರು. ಈ ಸಂದರ್ಭದಲ್ಲಿ ಜಿ,ಪಂ,ಸದಸ್ಯ ರಮೇಶ ನಾಯ್ಕ ದೇವಸ್ಥಾನ ಕಟ್ಟಲು ಬೇಕಾದ ಜೆಲ್ಲಿ ಕಲ್ಲು, ಇನ್ನೀತರ ಕಚ್ಚಾ ಸಾಮಗ್ರಿ ನೀಡುವ ಭರವಸೆ ನೀಡಿದರು.
ನಂತರ ಮಾತನಾಡಿದ ಯಲ್ಲಾಪುರದ ಟಿ,ಎಂ,ಎಸ್,ಸೊಸೈಟಿ ಅದ್ಯಕ್ಷ ನಾರಾಯಣ ಹೆಗಡೆ ಅಗ್ಗಾಶಿ ಕುಂಬ್ರಿ ಕೇವಲ ಹಣಕ್ಕಾಗಿ ಕಾರ್ಯಕ್ರಮ ಮಾಡಬೇಡಿ , ಜನರ ಇಷ್ಟದಂತೆ ಕಾರ್ಯಕ್ರಮ ನಡೆಯಬೇಕು, ಜನರ ಸಹಕಾರ ಎಲ್ಲಿರುತ್ತದೆಯೋ ಅಲ್ಲಿ ಕಾರ್ಯಕ್ರಮ ಯಶಸ್ಸು ಕಾಣುತ್ತದೆ, ಈ ದೃಷ್ಟಿಯಲ್ಲಿ ಸಪ್ತಸ್ವರ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ತಾಳಮದ್ದಳೆ ಕಲಾವಿದೆ ಇಂದುಮತಿ ದೇಸಾಯಿ ಮಾತನಾಡಿ ಸ್ಥಳೀಯ ಜನರಿಗೆ ಉತ್ತಮ ತರಬೇತಿ ನೀಡಿ ಇಲ್ಲಿಯ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಯಕ್ಷಗಾನ ಮತ್ತು ತಾಳಮದ್ದಳೆ ಕಲಿಸುವ ಕೆಲಸ ಸಪ್ತಸ್ವರ ಸೇವಾ ಸಂಸ್ಥೆ ಮಾಡಿದೆ ಎಂದರು.
ವೇದಿಕೆಯಲ್ಲಿ ಜಿ,ಪಂ,ಸದಸ್ಯ ರಮೇಶ ನಾಯ್ಕ, ಕೆ,ಡಿ,ಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಾ ದೇಸಾಯಿ, ಹಳಿಯಾಳದ ವಕೀಲ ಅರಶೀಣಗಿರಿ,ಹಿರಿಯ ಪತ್ರಕರ್ತ ಎ,ಆರ್,ದೇಸಾಯಿ, ಶಿಕ್ಷಕ ಜನಾರ್ಧನ ಹೆಗಡೆ, ಅರ್ಚಕರಾದ ಪ್ರಸನ್ನ ಭಟ್ಟ, ಡಿ,ಟಿ,ಹೆಗಡೆ, ಎಸ,ಟಿ,ದಾನಗೇರಿ, ನಂದುತೇಲಿ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ಮಾತನಾಡಿದರು, ಸಂದ್ಯಾ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ತದ ನಂತರ ಮಕ್ಕಳ ರತ್ನಾವತಿ ಕಲ್ಯಾಣ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು.

Leave a Comment